ಮಂಗಳೂರು : ಮಂಗಳೂರು ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮತ್ತೆ ಅಕ್ರಮ ಚಿನ್ನ ಸಾಗಾಟ ಪ್ರಕರಣ ಪತ್ತೆಯಾಗಿದೆ. ಕಾಸರಗೋಡು ಜಿಲ್ಲೆಯ ಕೂಡ್ಲು ಸಮೀಪದ ಅಬ್ದುಲ್ ರಹೀಂ ಏರಿಯಲ್ ಜಾಫರ್ ಬಂಧಿತ ವ್ಯಕ್ತಿ.
ದುಬೈನಿಂದ ಅಡುಗೆ ಪರಿಕರಗಳು, ಗ್ಯಾಸ್‌ಲೈಟರ್, ಎಂಪಿ 3 ಪ್ಲೇಯರ್ ಮತ್ತು ಇಯರ್ ಫೋನ್‌ಗಳೆಡಿಯಲ್ಲಿ ಬಚ್ಚಿಟ್ಟು ಚಿನ್ನವನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದುದನ್ನು ಏರ್ ಕಸ್ಟಮ್ಸ್ ಅಧಿಕಾರಿಗಳು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಪಾಸಣೆ ವೇಳೆ ಪತ್ತೆ ಹಚ್ಚಿದ್ದಾರೆ.
ಸುಮಾರು 9.6 ಲಕ್ಷ ರೂಪಾಯಿ ಮೌಲ್ಯದ 196 ಗ್ರಾಂ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.