ಬೆಂಗಳೂರು : ರಾಜ್ಯದಲ್ಲಿ ಹಾಳಾಗಿದ್ಯಾ ಕಾನೂನು ಸುವ್ಯವಸ್ಥೆ ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಯುವಕನಿಗೆ ಹಾಡಹಗಲೇ ಚಾಕು ಇರಿದಿರುವ ಘಟನೆ ಜೆಜೆ ನಗರದ ಸೆಲೂನ್ ಶಾಪ್ ಒಂದ್ರಲ್ಲಿ ನಡೆದಿದೆ. ಶಾಹಿದ್ ಅಹಮದ್ ಎಂಬ ಯುವಕನಿಗೆ ಹಿಗ್ಗಾಮುಗ್ಗ ಹಲ್ಲೆ ನಡೆಸಿ ಚಾಕುವಿನಿಂದ ಇರಿದ ಕಿಡಿಗೇಡಿಗಳು.
ತಬ್ರೇಜ್ ನದೀಂ, ಗುಡ್ಡು, ವಾಹೀಂ, ರಾಹಿಲ್ ರಿಯಾನ್, ರೋಷನ್, ಸಲೀಂ ಎಂಬುವರಿಂದ ನಡೆದ ಹಲ್ಲೆ ನಡೆದಿದ್ದು ಇದೇ ತಿಂಗಳ 16 ನೇ ತಾರೀಖು ರಾತ್ರಿ 9.30 ಕ್ಕೆ ನಡೆದ ಕೃತ್ಯ ತಡವಾಗಿ ಬೆಳಕಿಗೆ ಬಂದಿದೆ. ಮೊದಲಿಗೆ ಪಾರ್ಕಿಂಗ್ ವಿಚಾರವಾಗಿ ನಡೆದ ಗಲಾಟೆ ನಂತರ ಸೆಲೂನ್ ಶಾಪ್ ಗೆ ನುಗ್ಗಿ ಚಾಕುವಿನಿಂದ ಇರಿದ ಗ್ಯಾಂಗ್ . ಇದು ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದು ಈಗ ಎಲ್ಲೆಡೆ ಫುಲ್ ವೈರಲ್ ಆಗಿದೆ.
ಜೆಜೆ ನಗರ ಪೊಲೀಸರಿಂದ ಪ್ರಕರಣ ದಾಖಲಾಗಿದ್ದು ಪೊಲೀಸರಿಂದ ಆರೋಪಿಗಳ ಹುಡುಕಾಟ ನಡೆಸುತ್ತಿದ್ದಾರೆ ಗಾಯಾಳು ಶಾಹಿದ್ ಅಹಮದ್ ಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದೆ.