ಕೋಲಾರ : ಇಡೀ ದೇಶದಲ್ಲಿ 5 ಕೆಜಿ ಅಕ್ಕಿ ಕೊಡುವ ಕಾರ್ಯಕ್ರಮ ಕಾಂಗ್ರೆಸ್ ನದ್ದು ಅಂತಾ ಸಚಿವ ಬೋಸರಾಜು ಹೇಳಿದ್ದಾರೆ. ರಾಜ್ಯದಲ್ಲಿ ಅಕ್ಕಿ ಪಾಲಿಟಿಕ್ಸ್ ಶುರುವಾಗಿದ್ದು, ಈ ಬಗ್ಗೆ ಕೋಲಾರದಲ್ಲಿ ಪ್ರತಿಕ್ರಿಯೆ ನೀಡಿದ ಸಚಿವರು, ಅಕ್ಕಿ ಕೊಡುತ್ತೇವೆ ಎಂದು ಒಪ್ಪಿ ಪತ್ರ ಬರೆದಿದ್ದರು. ಇದೀಗ ರಾಜ್ಯಕ್ಕೆ ಅಕ್ಕಿ ಕೊಡೋದಿಲ್ಲ ಅಂತ ಹೇಳ್ತಿದ್ದಾರೆ. ಬಡವರಿಗೆ ಅಕ್ಕಿ ಕೊಡಬೇಕು ಅಂತ ರಾಜ್ಯ ಕಾಂಗ್ರೇಸ್ ಘೋಷಣೆ ಮಾಡಿದೆ. ಅಕ್ಕಿ ಸ್ಟಾಕ್ ಇದೆ ಕೊಡ್ತೇವೆ ಅಂತ ಹೇಳಿದ್ದರು, ನಮ್ಮ ಸಚಿವರು ಕೇಂದ್ರದ ದೆಹಲಿಯ ಸಚಿವರ ಬಳಿ ಹೋಗಿದ್ದಾರೆ. 3 ದಿನದಿಂದ ಪ್ರಯತ್ನಿಸುತ್ತಿದ್ದರೂ ನಮ್ಮ ರಾಜ್ಯದ ಸಚಿವರ ಸಂಪರ್ಕಕ್ಕೆ ಸಿಗ್ತಾ ಇಲ್ಲ. ಯಾವ ಕಾರಣದಿಂದ ಹೀಗೆ ಕೇಂದ್ರ ಸರ್ಕಾರ ಮಾಡ್ತಿದೆ ಅನ್ನೋದನ್ನ ರಾಜ್ಯದ ಜನ ಅರ್ಥ ಮಾಡಿಕೊಂಡಿದ್ದಾರೆ.
ಬಡವರಿಗೆ ಆಗಬೇಕಿದ್ದ ಯೋಜನೆಯನ್ನು ವಿಫಲಗೊಳಿಸಲು ಬಿಜೆಪಿಯ ಕೇಂದ್ರ ಸರ್ಕಾರ ಮುಂದಾಗಿದೆ. ರಾಜ್ಯದ ಬಿಜೆಪಿ ನಾಯಕರು ಸಹ ಇದಕ್ಕೆ ತದ್ವಿರುದ್ದ ಹೇಳಿಕೆಗಳ ಬರಹ ನೀಡುತ್ತಿದ್ದಾರೆ, ನಾವೇನು ಪುಕ್ಕಟೆ ಕೋಡಿ ಅಂತ ಕೇಳುತ್ತಿಲ್ಲ ಎಂದು ಹೇಳಿದರು.
ಇನ್ನು ಈ ಯೋಜನೆಯನ್ನು ಜಾರಿಗೆ ತಂದಿದ್ದು ಮೋದಿ ಸರ್ಕಾರ ಅಲ್ಲ, ಯುಪಿಎ ಸರ್ಕಾರದ ಅವಧಿಯಲ್ಲಿ. ಮನಮೋಹನ್ ಸಿಂಗ್ ಸೋನಿಯಾಗಾಂಧಿ ಅವರು ಸಿಎಫ್ ಎ ಅನ್ನ ಜಾರಿಗೆ ತಂದ್ರು, ಅಂದಿನಿಂದ ಇಡೀ ದೇಶದಲ್ಲಿ 5 ಕೆಜಿ ಅಕ್ಕಿ ಕೋಡೋ ಕಾರ್ಯಕ್ರಮ ಕಾಂಗ್ರೇಸ್ ಸರ್ಕಾರ ತಂದಿದೆ. ರಾಜ್ಯದಲ್ಲಿ ಬಡವರು ಕೂಲಿ ಕಾರ್ಮಿಕರು ಹೆಚ್ಚಾಗಿದ್ದಾರೆ. ಅದಕ್ಕೆ 5 ಕೆಜಿ ಅಕ್ಕಿ ಕೊಡಿ ಅಂತ ಕೇಳುತ್ತಿದ್ದೇವೆ. ನಮ್ಮ ಪ್ರಣಾಳಿಕೆಯಲ್ಕಿ ಇದನ್ನ ಸೇರಿಸಿದ್ದೇವೆ, ಅದರಂತೆ ಹೋಗಬೇಕು ಅಂತ ನಮ್ಮ ನಾಯಕರು ಪ್ರಯತ್ನ ಮಾಡುತ್ತಿದ್ದಾರೆ. ಈ ಹಿಂದೇಯೆ ಬಿಜೆಪಿಯ ರಾಷ್ಟ್ರಾಧ್ಯಕ್ಷ ಜಿ.ಪಿ ನಡ್ಡಾ ನಮ್ಮ ಸರ್ಕಾರ ಬರದಿದ್ದರೆ ನಮ್ಮ ಸಿಗೋದಿಲ್ಲ ಅಂತ ಎಚ್ಚರಿಕೆ ಕೊಟ್ಟಿದ್ದರು. ಅದರಂತೆ ಕಾರ್ಯರೂಪಕ್ಕೆ ತರುವ ಮೂಲಕ ಸೇಡಿನ ರಾಜಕಾರಣ ಮಾಡ್ತಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಗೆ ರಾಜ್ಯದ ಜನರು ತಕ್ಕ ಉತ್ತರವನ್ನು ನೀಡುತ್ತಾರೆ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.