ಬೆಂಗಳೂರು : ವಿಪಕ್ಷ ನಾಯಕ ಆರ್. ಅಶೋಕ್ ಆಯ್ಕೆಯಾದ ಹಿನ್ನೆಲೆ ಪದ್ಮನಾಭನಗರದಲ್ಲಿರುವ ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡರ ನಿವಾಸಕ್ಕೆ ಆಗಮಿಸಿದ್ದಾರೆ.
ವಿಪಕ್ಷ ನಾಯಕ ಆರ್ ಅಶೋಕ್ ಅವರು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರನ್ನು ಭೇಟಿಯಾಗಿ ಆಶೀರ್ವಾದವನ್ನು ಪಡೆದರು ಅಲ್ಲದೇ ಮಾರ್ಗದರ್ಶನ ಪಡೆದಿದ್ದಾರೆ.
ಮೈತ್ರಿ ಸೇರಿ ಹಲವು ವಿಚಾರಗಳ ಬಗ್ಗೆ ಹೆಚ್ ಡಿಡಿ ಜೊತೆ ಚರ್ಚೆ ನಡೆಸಿದ್ದಾರೆ. ದೇವೇಗೌಡರ ಭೇಟಿ ಬಳಿಕ ಅಶೋಕ್ ಮಾಧ್ಯಮದೊಂದಿಗೆ ಮಾತನಾಡಿ, ರಾಜ್ಯದ ಮುತ್ಸದಿ, ಹಿರಿಯರು ದೇವೇಗೌರನ್ನು ಭೇಟಿ ಮಾಡಿ, ಸಾಕಷ್ಟು ಹೊತ್ತು ಚರ್ಚೆ ಮಾಡಿದೆ ವಿಪಕ್ಷ ನಾಯಕನಾಗಿದ್ದಕ್ಕೆ ಅಭಿನಂದನೆ ಸಲ್ಲಿಸಿದ್ರು.
ನೀವು ಕುಮಾರಸ್ವಾಮಿ ಒಟ್ಟಾಗಿ ಕೆಲಸ ಮಾಡಿ ಅಂತ ಸಲಹೆ ನೀಡಿದ್ರು. 50 ವರ್ಷದ ರಾಜಕೀಯ ಜೀವನದಲ್ಲಿ ಇಂತಹ ಕೆಟ್ಟ ಸರ್ಕಾರ ನೋಡಿಲ್ಲ ಅಂದ್ರು. ಮೋದಿಯವರಿಗೆ ಗೌರವ ಬರುವ ನಿಟ್ಟಿನಲ್ಲಿ ಕೆಲಸ ಮಾಡಿ ಎಂದರು. ನಾನು ಕೂಡ ಲೋಕಸಭೆಗೆ ಸಂಪೂರ್ಣವಾಗಿ ತೊಡಗಿಕೊಳ್ತೇನೆ ಅಂದಿದ್ದಾರೆ.
ಮೈತ್ರಿ ವಿಚಾರವಾಗಿ ಕೂಡ ಮಾತುಕತೆ ಮಾಡಿದ್ದೇವೆ. ಕೋಮು ಸೌಹಾರ್ದತೆ ಹಾಳಾಗುವ ರೀತಿಯಲ್ಲಿ ಜಮೀರ್ ಮಾತನಾಡಿದ್ದಾರೆ. ಜಮೀರ್ ಮಾತಿಗೆ ದೇವೇಗೌಡರು ಅಸಮಧಾನ ವ್ಯಕ್ತಪಡಿಸಿದ್ರು ಕುಮಾರಸ್ವಾಮಿ, ರೇವಣ್ಣ ಬೆಳಗ್ಗೆ ಕರೆ ಮಾಡಿ ಹಾರೈಸಿದ್ದಾರೆ