ವಿಶ್ವದ ಮೂರನೇ ಶ್ರೀಮಂತ ವ್ಯಕ್ತಿಯಾಗಿದ್ದ ಅದಾನಿ (Adani) ಸಮೂಹದ ಮುಖ್ಯಸ್ಥ ಗೌತಮ್ ಅದಾನಿ ಈಗ 10 ದಿನದಲ್ಲಿ 22ನೇ ಸ್ಥಾನಕ್ಕೆ ಕುಸಿದಿದ್ದಾರೆ. ಹಿಂಡೆನ್ಬರ್ಗ್ ವರದಿಯಿಂದಾಗಿ (Hindenburg Research) ಕಳೆದ 10 ದಿನಗಳಲ್ಲಿ ಅದಾನಿ ಕಂಪನಿಯ ಮೌಲ್ಯ 10 ಲಕ್ಷ ಕೋಟಿ ರೂ. ಇಳಿಕೆಯಾಗಿದೆ. ಪರಿಣಾಮ ಬ್ಲೂಮ್ಬರ್ಗ್ ರಿಯಲ್ ಟೈಂ ಇಂಡೆಕ್ಸ್ನಲ್ಲಿ ಅದಾನಿ ಈಗ 22ನೇ ಸ್ಥಾನಕ್ಕೆ ಜಾರಿದ್ದಾರೆ.
ಭಾರೀ ಅಕ್ರಮದ ಆರೋಪದ ಹಿನ್ನೆಲೆಯಲ್ಲಿ ಅಮೆರಿಕ ಡೌ ಜೋನ್ಸ್ ತನ್ನ ಸುಸ್ಥಿರ ಸೂಚ್ಯಂಕ ಪಟ್ಟಿಯಿಂದ ಅದಾನಿ ಎಂಟರ್ಪ್ರೈಸಸ್ (Adani Enterprises) ಷೇರುಗಳನ್ನು ಕೈಬಿಟ್ಟಿದೆ. ಈ ಮಧ್ಯೆ ಜಾಗತಿಕ ರೇಟಿಂಗ್ ಏಜೆನ್ಸಿ ಎಸ್ ಆಂಡ್ಪಿ ಅದಾನಿ ಎಲೆಕ್ಟ್ರಿಸಿಟಿ ಮತ್ತು ಅದಾನಿ ಪೋರ್ಟ್ಸ್ ಕಂಪನಿಗಳ ಶ್ರೇಯಾಂಕವನ್ನು ನೆಗೆಟಿವ್ಗೆ ಇಳಿಸಿದೆ.
ಗುರುವಾರದವರೆಗೆ ಅದಾನಿ ಕಂಪನಿಯ ಷೇರುಗಳು ಕುಸಿತ ಕಾಣುತ್ತಿದ್ದವು. ಆದರೆ ಶುಕ್ರವಾರ ಅದಾನಿ ಎಂಟರ್ಪೈಸಸ್, ಅದಾನಿ ಪೋರ್ಟ್ಸ್, ಎಸಿಸಿ, ಅಂಬುಜಾ ಸಿಮೆಂಟ್ ಕಂಪನಿಗಳ ಷೇರು ಚೇತರಿಕೆ ಕಂಡಿದೆ.
ಇದನ್ನೂ ಓದಿ : – ಬಿಜೆಪಿಯವರು ರಥ ಯಾತ್ರೆಯಾದ್ರೂ ಮಾಡಲಿ, ಹೆಲಿಕಾಪ್ಟರ್ ಯಾತ್ರೆನಾದ್ರೂ ಮಾಡಲಿ – ಡಿ.ಕೆ ಶಿವಕುಮಾರ್