ಬೆಂಗಳೂರು : ಇತ್ತೀಚಿಗೆ ಸರ್ಕಾರಿ ಶಾಲೆಗಳ ಸ್ಥಿತಿ ನೋಡಿದ್ರೆ ಒಂದು ಕ್ಷಣ ಎಂತವರಿಗೂ ಕೂಡ ಮೈ ಜುಮ್ ಎನಿಸುತ್ತೆ. ಯಾಕಂದ್ರೆ ಇದು ಶಾಲೆಯೋ ಯಾವುದೊ ಪಾಳು ಬಿದ್ದ ಕಟ್ಟಡವೋ ಅಂತ ಕನ್ಫ್ಯೂಸ್ ಆಗುತ್ತೆ. ಅಂತಹದ್ದೇ ಒಂದು ಶಾಲೆಯ ದುಸ್ಥಿತಿಯ ಒಂದು ವರದಿ ಇಲ್ಲಿದೆ.
ಒಂದ್ಕಡೆ ಕಿತ್ತು ಹೋದ ಗೇಟ್.. ಮುರಿದು ಬಿದ್ದ ಸ್ಕೂಲ್ ಬೋರ್ಡ್ ಇದ್ರೆ, ಇತ್ತ ಮಕ್ಕಳ ಆಟದ ಮೈದಾನವೇ ಮಾಯ.. ಎಸ್.. ಈ ಶಾಲೆಯ ಒಳಗೆ ಎಂಟ್ರಿ ಕೊಡ್ತಿದ್ರೆ ಯಾವುದು ಭೂತ ಬಂಗಲೆನಾ ಅಂತ ಶಾಕ್ ಆಗ್ತೀರಾ. ಶಾಲೆಯ ಬೋರ್ಡ್ ಕಾಣಿಸದಂತೆ ಕಿತ್ತು ಹೋಗಿದ್ರೆ, ಶಾಲಾ ಆವರಣದಲ್ಲಿ ಕಂಪೌ೦ಡ್ ಅಂತೂ ಕಾಣಿಸೋದೆ ಇಲ್ಲ. ಮಕ್ಕಳ ಭವಿಷ್ಯ ಬರೆಯಬೇಕಾದ ಶಾಲೆಗಳ ಭವಿಷ್ಯವೇ ಕೆಟ್ಟು ನಿಂತಿದೆ.
ಸಿಲಿಕಾನ್ ಸಿಟಿಯ ತಿಮ್ಮಯ್ಯ ರಸ್ತೆಯ ಬಳಿ ಇರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದುಸ್ಥಿತಿ ಇದು. ಇತ್ತೀಚಿಗೆ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಸಂಖ್ಯೆ ಕಮ್ಮಿಯಾಗಿದೆ. ಇದಕ್ಕೆಲ್ಲ ಏನಪ್ಪಾ ಕಾರಣ ಅಂದ್ರೆ, ಸರ್ಕಾರಿ ಶಾಲೆಗಳನ್ನ ಸರಿಯಾಗಿ ನಿರ್ವಹಣೆ ಮಾಡದೇ ಇರೋದು, ಈ ಶಾಲೆಯ ಪರಿಸ್ಥಿತಿ ಅದೋಗತಿಗೆ ತಲುಪಿದ್ದು, ಪಾಲಕರು ಮಕ್ಕಳನ್ನ ಶಾಲೆಗೆ ಕಳಿಸುವುದಕ್ಕೆ ಹಿಂದೇಟು ಹಾಕ್ತಾ ಇದ್ದಾರೆ. ಒಂದು ಶಾಲೆ ಅಂದ್ರೆ ಮಕ್ಕಳಿಗೆ ಉತ್ತಮ ಕೊಠಡಿಗಳು, ಶಾಲಾ ಮೈದಾನ ಒಳ್ಳೆ ಶಿಕ್ಷಣ ಸಿಗಬೇಕು. ಆದ್ರೆ ಈ ಶಾಲೆಯಲ್ಲಿ ಕಿತ್ತು ಹೋದ ಶಾಲಾ ಬೋರ್ಡ್, ಕಂಪೌ೦ಡ್, ಆಟದ ಮೈದಾನವಂತೂ ಇಲ್ವೇ ಇಲ್ಲ. ಕಸ ಕಡ್ಡಿ ಇದೆಲ್ಲದರ ಮಧ್ಯೆ ಮಕ್ಕಳು ಶಿಕ್ಷಣ ಪಡೆಯುವ ಪರಿಸ್ಥಿತಿ ಎದುರಾಗಿದೆ.
ಈ ಶಾಲೆಯ ಆವರಣದಲ್ಲಿ ಇದ್ದ ಹಳೆಯ ಕಟ್ಟಡ ಶಿಥಿಲಾವಸ್ಥೆಗೊಂಡಿದ್ದರಿಂದ ಅದನ್ನು ಬೀಳಿಸಲಾಗಿದೆ. ಇನ್ನು ಅಲ್ಲಿಯೇ ಪಕ್ಕದ ಜಾಗದಲ್ಲಿ ಹೊಸ ಕಟ್ಟಡ ನಿರ್ಮಾಣಕ್ಕೆ ಕಾಮಗಾರಿ ಆರಂಭವಾದ್ರೂ ಕೆಲಸ ಮಾತ್ರ ಸ್ಥಗಿತಗೊಂಡಿದೆ. ರಾಡ್ ಹಾಕಿ ಹಾಗೆ ಬಿಡಲಾಗಿದೆ. ಇದರಿಂದ ಮಕ್ಕಳಿಗೆ ಸೇಫ್ಟಿ ಇಲ್ಲದಂತಾಗಿದೆ. ಸದ್ಯ ಪಕ್ಕದಲ್ಲೇ ತಾತ್ಕಾಲಿಕವಾಗಿ ಮುರೂ ಕೊಠಡಿಯ ಕಟ್ಟಡದಲ್ಲಿ ಮಕ್ಕಳು ಪಾಠ ಕೇಳುವಂತಾಗಿದೆ. ಇನ್ನು ಸರಿಯಾದ ಕಂಪೌ೦ಡ್ ಇಲ್ಲದ ಕಾರಣ ಸಂಜೆ ಹೊತ್ತಲ್ಲಿ ಅನೈತಿಕ ಚಟುವಟಿಕೆಗಳಿಗೆ ತಾಣವಾಗಿ ಬಿಟ್ಟಿದೆ.
ಒಟ್ನಲ್ಲಿ ದಿನದಿಂದ ದಿನಕ್ಕೆ ಸರ್ಕಾರಿ ಶಾಲೆಗಳ ಸಂಖ್ಯೆ ಕಡಿಮೆ ಆಗ್ತಾ ಇದ್ದು, ಶಾಲೆಗಳ ಸ್ಥಿತಿ ಅಂತೂ ಹೇಳತೀರದು. ಇರುವ ಅಲ್ಪ ಸ್ವಲ್ಪ ಶಾಲೆಗಳು ಮುಚ್ಚುವ ಮೊದಲು ಸರ್ಕಾರ ಎಚ್ಚೆತ್ತುಕೊಂಡು ಉತ್ತಮ ನಿರ್ವಹಣೆ ಒದಗಿಸಿಕೊಡಬೇಕು ಎಂಬುದೇ ರಾಜ ನ್ಯೂಸ್ ಆಶಯ….
ವರದಿ : ಹರ್ಷಿತಾ ಪಾಟೀಲ್