ಉಡುಪಿ : ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಮೊನ್ನೆ ನಡೆದ ಬಜೆಟ್ ಮಂಡನೆಯಲ್ಲಿ ಹಲವು ಉಚಿತ ಗ್ಯಾರಂಟಿಗಳನ್ನು ಜಾರಿಗೊಳಿಸಿರುವ ರಾಜ್ಯ ಸರ್ಕಾರ, ಅದಕ್ಕೆ ತಗುಲುವ ವೆಚ್ಚವನ್ನು ಸರಿದೂಗಿಸಲು ಮದ್ಯಪಾನ ಪ್ರಿಯರ ಮಲೆ ಭಾರ ಹೊರಿಸಿದೆ. ಅಬಕಾರಿ ತೆರಿಗೆಯಲ್ಲಿ ಹೆಚ್ಚಳ ಮಾಡಲಾಗಿದ್ದು, ಇದರಿಂದ ಮದ್ಯ ದುಬಾರಿಯಾಗಿದ್ದು, ಈ ಕಾರಣಕ್ಕೆ ರೊಚಿಗೆದ್ದ ಕೂಲಿ ಕಾರ್ಮಿಕರು ಉಡುಪಿಯಲ್ಲಿ ಪ್ರತಿಭಟನೆ ಮಾಡಿದ್ದಾರೆ.
ಹೌದು, ಮೊನ್ನೆ ನಡೆದ ಬಜೆಟ್ ನಲ್ಲಿ ಸರಕಾರ ಮದ್ಯದ ಬೆಲೆಯಲ್ಲಿ 20 ಶೆಕಡಾ ಏರಿಕೆ ಮಾಡಿದ್ದರಿಂದ ಕುಡುಕರು ರೊಚ್ಚಿಗೆದ್ದಿದ್ದು, ಮಹಿಳೆಯರಿಗೆ ಉಚಿತ ಬಸ್‌ನಂತೆ ನಮಗೂ ಉಚಿತ ಮದ್ಯ ನೀಡುವಂತೆ ಸರಕಾರಕ್ಕೆ ಆಗ್ರಹಿಸಿ ಉಡುಪಿಯಲ್ಲಿ ಕೂಲಿ ಕಾರ್ಮಿಕರ ಪ್ರತಿಭಟನೆ ಮಾಡಿದ್ದಾರೆ. ಉಡುಪಿಯ ಚಿತ್ತರಂಜನ್ ಸರ್ಕಲ್‌ನಲ್ಲಿ ವಿನೂತನ ರೀತಿಯಲ್ಲಿ ಸರಕಾರವನ್ನು ಆಗ್ರಹಿಸಿ, ಪ್ರತಿಭಟನೆ ಮಾಡಿದ ಕೂಲಿ ಕಾರ್ಮಿಕರು. ಸರಕಾರದ ಉಚಿತ ಯೋಜನೆಗೆ ಹಣ ನಮ್ಮಿಂದಲೇ ಬರುವುದು ಹಾಗಗಿ ನಮಗೆ ಮದ್ಯದ ಬೆಲೆ ಇಳಿಕೆ ಮಾಡಿ ಎಂದು ಆಗ್ರಹಿಸಿದ್ದು,
ಉಚಿತ ನೀಡದಿದ್ದಲ್ಲಿ ಬೆಳಿಗ್ಗೆ ನೈಂಟಿ, ಸಂಜೆ ನೈಂಟಿ ಉಚಿತವಾಗಿ ನೀಡಿ ಎಂದು ಕೇಳಿದ್ದಾರೆ. ಅದೂ ಸಹ ಆಗದಿದ್ದಲ್ಲಿ ಸಾರಾಯಿಯನ್ನು ಬಂದ್ ಮಾಡಿ, ಆ ಹಣವನ್ನು ನಾವು ನಮ್ಮ ಹೆಂಡತಿ, ಮಕ್ಕಳಿಗೆ ನಿಡುತ್ತೇವೆ. ಹಾಗೂ ನಮ್ಮ ಹೆಂಡತಿ, ಮಕ್ಕಳನ್ನು ನಾವೇ ಹಣ ಕೊಟ್ಟು ದೇವಸ್ಥಾನಗಳಿಗೆ ಕರೆದುಕೊಂಡು ಹೋಗುತ್ತೆವೆ ಎಂದಿದ್ದಾರೆ. ಈ ಪ್ರತಿಭಟನೆಯು ಉಡುಪಿ ಜಿಲ್ಲಾ ನಾಗರಿಕ ಸಮಿತಿ, ನಿತ್ಯಾನಂದ ಒಳಕಾಡು ನೇತೃತ್ವದಲ್ಲಿ ನಡೆದಿದ್ದು, ನಂತರ ಕುಡುಕರಿಗೆ ಹಾರ ಹಾಕಿ ಸನ್ಮಾನ, ಆರತಿ ಎತ್ತಿ ಗೌರವವನ್ನೂ ಮಾಡಲಾಗಿದೆ.