ಬೆಂಗಳೂರು : ರಾಜ್ಯಾದ್ಯಂತ ಸರ್ಕಾರಿ ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ಬೆಳ್ಳಂಬೆಳಗ್ಗೆ ಸರ್ಕಾರಿ ಅಧಿಕಾರಿಗಳ ನಿದ್ದೆಕೆಡಿಸಿದಂತಾಗಿದೆ.
ಲೋಕಾಯುಕ್ತ ಅಧಿಕಾರಿಗಳು ಒಟ್ಟು ಏಳು ಕಡೆ ದಾಳಿ ನಡೆಸಿದ್ದು, ಅದರಲ್ಲಿ ಬಳ್ಳಾರಿಯ ಐದು ಕಡೆ ಹಾಗೂ ಬೆಂಗಳೂರಿನ ಎರಡು ಕಡೆ ಶೋಧ ನಡೆಸಿದ್ದಾರೆ. ಕುಂದಣ ಪಿಡಿಒ ಪದ್ಮನಾಬ್ ಅವರಿಗೆ ಸೇರಿದ ಮೂರು ಮನೆ ಮೆನಗಳ ಮೇಲೆ ಅಧಿಕಾರಿಗಳು ದಾಳಿ ಮಾಡಿದ್ದು, ದಾಖಲೆ ಪರಿಶೀಲಿಸುತ್ತಿದ್ದರೆ. ಜೊತೆಗೆ ದಾಬಸ್ಪೇಟೆ ಹಾಗೂ ತುಮಕೂರಿನಲ್ಲಿ ಸಹ ಪದ್ಮನಾಬ್ಗೆ ಸಂಬಂಧಿಸಿದ ಸ್ಥಳಗಳಲ್ಲಿ ಪರಿಶೀಲನೆ ಮುಂದುವರಿಸಿದ್ದಾರೆ.
ವಿಜಯನಗರ ಜಿಲ್ಲೆಯ ಬೆಸ್ಕಾಂ ಜನರಲ್ ಮ್ಯಾನೇಜರ್ ನಾಗರಾಜ್ ಮತ್ತು ಅವರ ಸಂಬಂಧಿಕರ ಮನೆಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ನಾಗರಾಜ್ ಅವರು ಕೂಡ್ಲಿಗಿ ಪಟ್ಟಣ, ಗುಡೇಕೋಟೆ ಗ್ರಾಮದಲ್ಲಿ ಅಕ್ರಮ ಆಸ್ತಿ ಹೊಂದಿರುವ ಆರೋಪ ಕೇಳಿಬಂದಿದೆ. ಈ ಅಕ್ರಮ ಹಣದಲ್ಲಿ ಪೆಟ್ರೋಲ್ ಬಂಕ್, ಮನೆ, ಜಮೀನು ಖರೀದಿ ಮಾಡಿದ್ದಾರೆ .
ಕೆಲ ದಿನಗಳ ಹಿಂದೆ ನಾಗರಾಜ್ 7.50 ಲಕ್ಷ ಹಣ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದನು. ಇನ್ನು ಮಂಡ್ಯ ಜಿಲ್ಲೆಯಲ್ಲಿ ಮೂರು ಕಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಬಿಬಿಎಂಪಿ ಅಧಿಕಾರಿ ಮಂಜೇಶ್ ಹಾಗೂ ಅವರ ಸಂಬಂಧಿಕರ ಮನೆಗಳ ಮೇಲೆ ರೇಡ್ ಮಾಡಲಾಗಿದೆ. ಮಂಜೇಶ್ ಸಂಬಂಧಿ ಸುರೇಂದ್ರಗೆ ಸೇರಿದ ಮಳವಳ್ಳಿ ತಾಲೂಕಿನ ಹಲಗೂರು, ಗುಂಡಾಪುರ ಗ್ರಾಮದ ಮನೆಗಳ ಮೇಲೆ ಮತ್ತು ಮಂಜೇಶ್ ಅಜ್ಜಿ ವಾಸಿಸುವ ಮದ್ದೂರು ತಾಲೂಕಿನ ಎಸ್.ಐ.ಕೋಡಿಹಳ್ಳಿಯಲ್ಲಿ ಮನೆ ಮೇಲೂ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ.