ಅಮೆರಿಕ (America) ಮೂಲದ ಸಂಸ್ಥೆಯೊಂದು ಬಿಡುಗಡೆ ಮಾಡಿರುವ ಜಾಗತಿಕ ಜನಪ್ರಿಯ ನಾಯಕರ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಮತ್ತೊಮ್ಮೆ ಅಗ್ರ ಸ್ಥಾನ ಪಡೆದಿದ್ದಾರೆ. ಅಮೆರಿಕದ ಸಲಹಾ ಸಂಸ್ಥೆ ‘ಮಾರ್ನಿಂಗ್ ಕನ್ಸಲ್ಟ್ (Morning Consult)’ ಪಟ್ಟಿಯನ್ನು ಬಿಡುಗಡೆ ಮಾಡಿದ್ದು ಶೇ 78ರ ರೇಟಿಂಗ್ನೊಂದಿಗೆ ಮೋದಿ ಮೊದಲ ಸ್ಥಾನದಲ್ಲಿದ್ದಾರೆ. ಇದರೊಂದಿಗೆ ಮೋದಿ ಅವರು ಸತತ ಎರಡನೇ ವರ್ಷ ಪಟ್ಟಿಯಲ್ಲಿ ಮೊದಲ ಸ್ಥಾನ ಗಳಿಸಿದಂತಾಗಿದೆ.
ಜನಪ್ರಿಯತೆಯ ವಿಚಾರದಲ್ಲಿ ಮೋದಿ ಅವರು ಅಮೆರಿಕದ ಅಧ್ಯಕ್ಷ ಜೋ ಬೈಡನ್, ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್, ಇಂಗ್ಲೆಂಡ್ ಪ್ರಧಾನಿ ರಿಷಿ ಸುನಕ್ (Rishi sunak) ಅವರನ್ನೂ ಮೀರಿಸಿದ್ದಾರೆ. ಒಟ್ಟು 22 ನಾಯಕರ ಹೆಸರು ಮುಂದಿಟ್ಟುಕೊಂಡು ‘ಮಾರ್ನಿಂಗ್ ಕನ್ಸಲ್ಟ್’ ಸಮೀಕ್ಷೆ ನಡೆಸಿತ್ತು. ಮೋದಿ ಅವರು ಶೇ 78ರ ರೇಟಿಂಗ್ನೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಮೆಕ್ಸಿಕೊದ ಅಧ್ಯಕ್ಷ ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್ ಶೇ 68ರ ರೇಟಿಂಗ್ನೊಂದಿಗೆ ನಂತರದ ಸ್ಥಾನದಲ್ಲಿದ್ದಾರೆ. ಸ್ವಿಸ್ ಅಧ್ಯಕ್ಷ ಅಲೈನ್ ಬರ್ಸೆಟ್ ಶೇ 62ರ ರೇಟಿಂಗ್ ಪಡೆದು ಮೂರನೇ ಸ್ಥಾನದಲ್ಲಿದ್ದಾರೆ.ಅಮೆರಿಕದ ಅಧ್ಯಕ್ಷ ಜೋ ಬೈಡನ್ ಹಾಗೂ ಕೆನಡಾದ ಜಸ್ಟಿನ್ ಟ್ರುಡೊ ಶೇ 40 ರೇಟಿಂಗ್ ಗಳಿಸಿ ಏಳು ಮತ್ತು 9ನೇ ಸ್ಥಾನ ಗಳಿಸಿದ್ದಾರೆ. ರಿಷಿ ಸುನಕ್ ಶೇ 30ರ ರೇಟಿಂಗ್ನೊಂದಿಗೆ ಪಟ್ಟಿಯಲ್ಲಿ 13ನೇ ಸ್ಥಾನ ಗಳಿಸಿದ್ದಾರೆ.
ಇದನ್ನೂ ಓದಿ : – ಸರ್ಕಾರದ ವಿರುದ್ಧ ಮತ್ತೆ ಸಿಡಿದೆದ್ದ ರಾಜ್ಯ ಸಾರಿಗೆ ನೌಕರರು..!