ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನ ಗಿರಿನಗರದ ಮೂಕಾಂಭಿಕ ನಗರದಲ್ಲಿ ನೈಂಟಿ ಎಣ್ಣೆ ಕೊಡಿಸದಿದ್ದಕ್ಕೆ ಹಿರಿಯ ವ್ಯಕ್ತಿಯ ಮೇಲೆ ಇಟ್ಟಿಗೆಯಿಂದ ಮುಖಕ್ಕೆ ಹಲ್ಲೆಗೈದ ಘಟನೆ ಬೆಳಕಿಗೆ ಬಂದಿದೆ.
ಸಿಂಗಾರ ವೇಲು ಎಂಬುವವರು ಗಿರಿನಗರದ ಮನೆ ಬಳಿ ಕಬಾಬ್ ತಿನ್ನುತ್ತಿದ್ರು. ಈ ವೇಳೆ ಎಂಟ್ರಿಕೊಟ್ಟಿದ್ದ ಆರೋಪಿ ಧರ್ಮ, ನೈಂಟಿ ಎಣ್ಣೆ ಕೊಡಿಸು ಅಂತ ಸಿಂಗಾರ ವೇಲುರಿಗೆ ಪೀಡಿಸಿದ್ದಾನೆ. ಕೊಡಿಸದಿದ್ದಾಗ ಕಾಲಲ್ಲಿ ಒದ್ದಿದ್ದಲ್ಲದೇ, ಇಟ್ಟಿಗೆಯಿಂದ ಹಲ್ಲೆ ಮಾಡಿದ್ದಾನೆ.
ಹಲ್ಲೆ ಪರಿಣಾಮ ಸಿಂಗಾರ ವೇಲುರ ತುಟಿ ಹರಿದು ಹೋಗಿದೆ. ಸದ್ಯ ಆಸ್ಪತ್ರೆಯಲ್ಲಿ ಸಿಂಗಾರವೇಲು ಪ್ಲಾಸ್ಟಿಕ್ ಸರ್ಜರಿ ಮಾಡಿಸಿದ್ದಾರೆ. ಹಲ್ಲೆಯ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಡಿಸೆಂಬರ್ 29 ರ ರಾತ್ರಿ 8:30 ರ ಸುಮಾರಿಗೆ ಘಟನೆ ಜರುಗಿದ್ದು, ಗಿರಿನಗರ ಪೊಲೀಸರಿಂದ ಆರೋಪಿ ಧರ್ಮನಿಗಾಗಿ ತಲಾಶ್ ನಡೆದಿದೆ.