ಬೆಂಗಳೂರು : ಇದು ಕೇವಲ ಹುಬ್ಬಳ್ಳಿಯಲ್ಲಿ ಮಾತ್ರವಲ್ಲ, ಎಲ್ಲ ಕಡೆಯೂ ಹಳೆಯ ಕೇಸ್ ರಿವ್ಯೂ ಮಾಡ್ತಿದ್ದೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಹಿಂದೂ ಸಂಘಟನೆಯವರ ಬಂಧನ ವಿಚಾರವಾಗಿ ಪ್ರತಿಕ್ರಿಯಿಸಿ ಬಿಜೆಪಿಯವರು ಸರ್ಕಾರ ನಡೆಸಿದ್ದಾರೆ.ಯಡಿಯೂರಪ್ಪನವರೂ ಸರ್ಕಾರ ನಡೆಸಿದ್ದಾರೆ. ಸ್ಪೆಸಿಫಿಕ್ ಆಗಿ ಅದೊಂದೇ ಕೇಸ್ ಆಗಿಲ್ಲ. ಎಲ್ಲ ಕೇಸ್ ಗಳನ್ನೂ ರಿವ್ಯೂ ಮಾಡುವಾಗ ಇದೂ ಆಗಿದೆ. ಸುಮ್ನೆ ರಾಜಕೀಯ ಉದ್ದೇಶದಿಂದ ಟೀಕೆ ಮಾಡಬಾರದು. ನೆಲದ ಕಾನೂನಿನ ಪ್ರಕಾರ ಮಾಡಿದ್ದಾರೆ.
ಬಾಕಿ ಉಳಿದ ಅರೆಸ್ಟ್ ಆದವರು ಹಿಂದೂಗಳಲ್ವಾ..? ಅವರಿಗೊಂದು ನ್ಯಾಯ ಇವರಿಗೊಂದು ನ್ಯಾಯವಾ..? ಕಾನೂನು ಪ್ರಕಾರ ಏನು ಆಗುತ್ತದೆಯೋ ಆಗುತ್ತದೆ. ಕೇವಲ ಹುಬ್ಬಳ್ಳಿಯಲ್ಲಿ ಮಾತ್ರವಲ್ಲ, ಎಲ್ಲ ಕಡೆಯೂ ಹಳೆಯ ಕೇಸ್ ರಿವ್ಯೂ ಮಾಡ್ತಿದ್ದೇವೆ. ಅಯೋಧ್ಯ ಸಂದರ್ಭದಲ್ಲಿ ಬಂಧನ ಆಗಿದ್ದು ಕಾಕತಾಳೀಯ ಅಷ್ಟೇ. ನಮಗೇನೂ ಕಮಿಷನರ್ ಗಮನಕ್ಕೆ ತಂದು ಅರೆಸ್ಟ್ ಮಾಡಿಲ್ಲ.
ನಮ್ಮ ಪೊಲೀಸರಿಗೆ ಕಾನೂನು ಪುಸ್ತಕ ಕೊಟ್ಟಿಲ್ವಾ? ಕಾನೂನು ಪ್ರಕಾರ ಪೊಲೀಸರು ಕ್ರಮ ಕೈಗೊಂಡಿದ್ದಾರೆ ಎಂದು ಹೇಳಿದರು. ಕನ್ನಡಪರ ಹೋರಾಟಗಾರರ ಮನೆ ಮೇಲೆ ರಾತ್ರೋ ರಾತ್ರಿ ಪೊಲೀಸರ ಸರ್ಚ್ ವಾರೆಂಟ್ ವಿಚಾರವಾಗಿ ಮಾತನಾಡಿ ಆ ರೀತಿ ಮಾಡಲು ಹೋಗಿಲ್ಲ. ಯಾರ ಮೇಲೆ ಕೇಸ್ ಮಾಡಿದ್ದಾರೆ ಅವರ ಮನೆ ಸರ್ಚ್ ಮಾಡಿದ್ದಾರೆ. ಇನೋಸೆಂಟ್ ಜನರು ಯಾರಿದ್ದಾರೆ ಅವರನ್ನ ಟಚ್ ಮಾಡಿಲ್ಲ. ಕರ್ನಾಟಕದ ಪೊಲೀಸರು ಇನ್ನೂ ಆ ರೀತಿ ವರ್ತನೆ ಮಾಡಿಲ್ಲ. ಯಾರಿಗೆ ಕೇಸ್ ಆಗಿರುತ್ತೆ ಅವರನ್ನು ವಿಚಾರಣೆಗೆ ಬನ್ನಿ ಅಂತ ಕರೆದು ಹೋಗಿದ್ದಾರೆ ಅಷ್ಟೇ ಎಂದು ಹೇಳಿದರು.
ವರದಿ : ಬಸವರಾಜ ಹೂಗಾರ