ಅಕ್ಕಿ ಮೋದಿ ಕೊಟ್ಟಿದ್ದು ಎಂದು ಬೊಮ್ಮಾಯಿ ಹೇಳಿದ್ರು. ಸೋನಿಯಾ ಗಾಂಧಿ ನೇತೃತ್ವದ ಯುಪಿಎನಲ್ಲಿ ಮನಮೋಹನ್ ಸಿಂಗ್ ಅಕ್ಕಿ ಕಾನೂನು ತಂದಿದ್ದು ಎಂದಿ ಡಿಸಿಎಂ ಡಿಕೆಶಿವಕುಮಾರ್ ಮಾಜಿ ಸಿಎಂ ಬೊಮ್ಮಾಯಿ ಅವರಿಗೆ ತಿರಗೇಟು ಕೊಟ್ಟಿದ್ದಾರೆ.
ಅನ್ನಭಾಗ್ಯ ಯೋಜನೆ ಜಾರಿ ವಿಚಾರವಾಗಿ ನಗರದಲ್ಲಿ ಮಾತನಾಡಿದ ಅವರು ಭತ್ತ ಅಕ್ಕಿ ಒಂದೇ ದಿನದಲ್ಲಿ ಬೆಳೆಯೋಕೆ ಆಗುತ್ತಾ..? ಅಕ್ಕಿ ಕೊಡಿ ಎಂದು ಕೇಂದ್ರ ಸರ್ಕಾರವನ್ನ ಕೇಳ್ತಿದ್ದೇವೆ,ಅವ್ರು ಕೊಡ್ತಿಲ್ಲ.ಅಕ್ಕಿ ಮೋದಿ ಕೊಟ್ಟಿದ್ದು ಎಂದು ಬೊಮ್ಮಾಯಿ ಹೇಳಿದ್ರು. ಆದರೆ ಸೋನಿಯಾ ಗಾಂಧಿ ನೇತೃತ್ವದ ಯುಪಿಎನಲ್ಲಿ ಮನಮೋಹನ್ ಸಿಂಗ್ ಅಕ್ಕಿ ಕಾನೂನು ತಂದಿದ್ದು. ಇದು ಕಾಂಗ್ರೆಸ್ ಸರ್ಕಾರದ ಯೋಜನೆಯಾಗಿದೆ. ಹಿಂದೆ ಸಿದ್ದರಾಮಯ್ಯನವರು ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿ ಅನ್ನಭಾಗ್ಯ ಯೋಜನೆ ಘೋಷಣೆ ಮಾಡಿದ್ರು. ಅನ್ನ ಭಾಗ್ಯ ಕಾನೂನು ತಂದಿದ್ದು ಕಾಂಗ್ರೆಸ್. 5 ಕೆಜಿ ಯಿಂದ 10 ಕೆಜಿಗೆ ಅಂತ ತಂದಿದ್ದೇವೆ ಅದನ್ನು ಕೊಡಲಿದೆ. ರಾಗಿ,ಗೋಧಿ ಕೊಡಿ ಎಂದು ಕೆಲವರು ಕೇಳಿದ್ದಾರೆ.
ಕೇಂದ್ರ ಸರ್ಕಾರ ಅಕ್ಕಿ ಕೊಡದೇ ಇದ್ದಾಗ ವಿಧಿ ಇಲ್ಲದೇ ಬೇರೆ ಕಡೆ ಖರೀದಿ ಮಾಡಿ ಕೊಡ್ತೀವಿ ಎಂದು ಹೇಳಿದರು. ಇನ್ನೂ ಗ್ಯಾರಂಟಿಗಳ ವಿಚಾರವಾಗಿ ಪ್ರತಿಕ್ರಿಯಿಸಿ ನಾವೇನು ಮಾತು ಕೊಟ್ಟಿದ್ವೊ ಅದನ್ನ ಉಳಿಸಿಕೊಳ್ಳುತ್ತೇವೆ. 5 ಯೋಜನೆಗಳನ್ನು ಜಾರಿಗೆ ತರುತ್ತೇವೆ.ಬಿಜೆಪಿಯವರಿಗೆ ಸೋಲನ್ನು ವಿಮರ್ಶೆ ಮಾಡಿ ಒಪ್ಪಿಕೊಳ್ಳೋಕೆ ಆಗ್ತಿಲ್ಲ.
ಒಂದು ಕಾಳು ಕಡಿಮೆಯಾದ್ರೂ ಪ್ರತಿಭಟನೆ ಮಾಡೋದಾಗಿ ಹೇಳಿದ್ದಾರೆ. 365 ದಿನವೂ ಪ್ರತಿಭಟನೆ ಮಾಡಲಿ. ಅವರು ಹೋರಾಟ ಮಾಡ್ತಿರಬೇಕು,ವಿರೋಧ ಮಾಡ್ತಿರಬೇಕು. ಬಿಜೆಪಿಯವರು ವಿಪಕ್ಷದಲ್ಲಿ ಕೂತಿರಬೇಕು.ನಾವು ಆಡಳಿತದಲ್ಲಿ ಜನರ ಸೇವೆ ಮಾಡುತ್ತಿರಬೇಕು ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ವರದಿ : ಬಸವರಾಜ ಹೂಗಾರ