ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಬೆಸ್ಕಾಂ ಸಿಬ್ಬಂದಿಗಳ ಮತ್ತೊಂದು ಯಡವಟ್ಟು ಮುನ್ನಲೆಗೆ ಬಂದಿದ್ದು, ಮನೆ ಮುಂದೆಯೇ ಇದ್ದ ವಿದ್ಯುತ್ ತಂತಿ ಸ್ಪರ್ಶಿಸಿ 9 ವರ್ಷದ ಮಗು ಗಂಭೀರ ಗಾಯಗೊಂಡ ಘಟನೆ ಬೆಳಕಿಗೆ ಬಂದಿದೆ.
ಬಂಡೆಪಾಳ್ಯದ ನಿವಾಸಿ ಇರ್ಫಾನ್ ಖಾನ್ ಪುತ್ರಿ ಝೋಯಾ ಖಾನಂ ವಿದ್ಯುತ್ ಸ್ಪರ್ಶಿಸಿ ಗಾಯಗೊಂಡವರು. ನಿನ್ನೆ ಮಧ್ಯಾಹ್ನ ದುರ್ಘಟನೆ ಘಟನೆ ನಡೆದಿದೆ. ವಿದ್ಯುತ್ ತಂತಿ ಮನೆ ಮುಂಭಾಗ ಹತ್ತಿರದಲ್ಲಿ ಇದ್ದರೆ ಸೇಫ್ಟಿ ಪೈಪ್ ಅಳವಡಿಸುವುದು ಕಡ್ಡಾಯವಾಗಿದ್ರು, ಝೋಯಾ ಖಾನಂ ವಾಸಿಸುತ್ತಿದ್ದ ಮನೆಯ ಮುಂದೆ ಸೇಫ್ಟಿ ಪೈಪ್ ಅಳವಡಿಸದೆ ಇರುವುದೇ ಈ ಅವಘಡಕ್ಕೆ ಕಾರಣವಾಗಿದೆ. ಮೊದಲ ಮಹಡಿಯಲ್ಲಿ ನಿಂತರೆ ಕೈಗೆಟಕುವ ರೀತಿಯಲ್ಲಿದೆ ವೈಯರ್ ಇತ್ತು ಕೆಲ ತಿಂಗಳ ಹಿಂದೆ ಸೇಫ್ಟಿ ವೈಯರ್ ಇಲ್ಲಿ ಅಳವಡಿಸಲಾಗಿತ್ತು. ಆದ್ರೆ ಕೆಲ ದಿನಗಳ ಹಿಂದೆ ಆ ಭಾಗದಲ್ಲಿ ಬೇರೆ ಕರೆಂಟ್ ವೈಯರ್ ಅಳವಡಿಸಿದ್ದರು. ಆದ್ರೆ ಕರೆಂಟ್ ವೈಯರ್ ಮೇಲೆ ಸೇಫ್ಟಿ ವೈರ್ ಹಾಕದೆ ನಿರ್ಲ್ಯಕ್ಷ ವಹಿಸಿದ್ದಾರೆ. ನಿನ್ನೆ ಕರೆಂಟ್ ವೈಯರ್ ಮೇಲೆ ಮಾಪ್ ಬಿದ್ದಿದೆ.. (ನೆಲ ಒರೆಸುವುದು) ಅದನ್ನು ತೆಗೆದುಕೊಳ್ಳಲು ಹೋಗಾದ ಝೋಯಾ ಗೆ ಕರೆಂಟ್ ಶಾಕ್ ಹೊಡೆದಿದೆ.. ಅದೃಷ್ಟವಾಷತ್ ಯಾವುದೇ ಪ್ರಾಣಾಪಾಯವಾಗಿಲ್ಲ. 20 ರಷ್ಟು ಸುಟ್ಟಗಾಯಗಳಾಗಿವೆ.ಸದ್ಯ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮಗುವಿಗೆ ಚಿಕಿತ್ಸೆ ನೀಡುತ್ತಿದ್ದಾರೆ.