ಬೆಂಗಳೂರು : ಸರ್ಕಾರಿ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯಅವರನ್ನು ರಾಜ್ಯ ಅರ್ಚಕರ ಒಕ್ಕೂಟದ ನಿಯೋಗ ಭೇಟಿ ಮಾಡಿ ಹಲವು ಬೇಡಿಕೆಗಳ ಈಡೇರಿಕೆಗೆ ಮನವಿ ಮಾಡಿದ್ದಾರೆ ಎಂದು ವರದಿಯಾಗಿದೆ.
ಮನವಿ ಮಾಡಿದ ಬೇಡಿಕೆ :
- ಮುಜರಾಯಿ ದೇವಾಲಯಗಳಿಗೆ ಖಾಸಗಿ ಟ್ರಸ್ಟ್ ರಚಿಸುವ ಹಿಂದಿನ ಸರ್ಕಾರದ ನಿರ್ಧಾರ ಹಿಂಪಡೆಯಲು ಮನವಿ
- ಧಾರ್ಮಿಕ ದತ್ತಿ ಇಲಾಖೆಯಲ್ಲು ನೌಕರರ ಕೊರತೆ ಇದ್ದು, ನೇಮಕಕ್ಕೆ ಮನವಿ
- ಧಾರ್ಮಿಕ ದತ್ತಿ ಇಲಾಖೆ ಅಧೀನದ ದೇವಾಲಯಗಳ ಅರ್ಚಕರಿಗೆ ನಿವೃತ್ತಿ ವಯಸ್ಸಿನ ಮಿತಿ ರದ್ದು ಮಾಡುವಂತೆ ಮನವಿ
- ಗ್ರಾಮೀಣ ಭಾಗದ ದೇವಾಲಯಗಳಿಗೆ ಪೂಜಾ ಸಾಮಗ್ರಿಗಳ ಖರೀದಿ ಮತ್ತು ಸಂಭಾವನೆ ಮಿತಿ ಹೆಚ್ಚಳಕ್ಕೆ ಮನವಿ. ಈಗ ಮಾಸಿಕ 5 ಸಾವಿರ ರೂ ಇದ್ದು, 10 ಸಾವಿರ ರೂ ಏರಿಕೆಗೆ ಮನವಿ