ಬೆಂಗಳೂರು : ಅದು ಇತಿಹಾಸ ಪ್ರಸಿದ್ಧ ಕಂಬದ ವೀರಭದ್ರಸ್ವಾಮಿ ಸನ್ನಿಧಾನ. ಯಶವಂತಪು ಕ್ಷೇತ್ರದ ಕನ್ನಳ್ಳಿ ವೀರಭದ್ರಸ್ವಾಮಿ ಎಂದೇ ಸುಪ್ರಿದ್ದ. ಕಳೆದ ತಿಂಗಳು ಈ ದೇವಸ್ಥಾನದ ಸಮುದಾಯ ದೇವಸ್ಥಾನದಲ್ಲಿ ನಡೆಯುತ್ತಿದ್ದ ಮದುವೆ ವೇಳೆ ಅಗ್ನಿ ಅವಘಡ ಸಂಭವಿಸಿತ್ತು. ದೇವಸ್ಥಾನದ ಪಾರ್ಕಿಂಗ್ ನಲ್ಲಿ ನಾಲ್ಕೈದು ಬೈಲ್ ಗಳು ಹೊತ್ತಿ ಉರಿದಿದ್ವು. ನೋಡ ನೋಡ್ತಿದ್ದ ಬೈಕ್ ಗಳು ಸುಟ್ಟು ಭಸ್ಮವಾಗಿತ್ತು. ಹಿಂದೆಂದು ದೇವಸ್ಥಾನದಲ್ಲಿ ಈ ರೀತಿ ಅವಘಡ ಆಗಿರ್ಲಿಲ್ಲ. ಸುಟ್ಟು ಭಸ್ಮವಾದ ಬೈಕ್‌ಗಳ ಪೈಕಿ ಇದೇ ದೇವಸ್ಥನಾದ ಅರ್ಚಕರ ಬೈಕ್ ಕೂಡ ಇತ್ತು. ಈ ಬಗ್ಗೆ ತಾವರಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು ಸ್ಥಳಕ್ಕೆ ಬಂದ ಪೊಲೀಸ್ರು ಬೆಂಕಿ ಇಟ್ಟವರು ಯಾರು ಅಂತ ತನಿಖೆ ಆರಂಭಿಸಿದ್ರ.
ಮೊದಲಿಗೆ ಗ್ರಾಮಸ್ತರು ಅದೇ ಗ್ರಾಮಸ್ಥರ ಯತೀಶ್ ಮತ್ತಿಬ್ಬರ ಹೆಸರನ್ನ ಹೇಳಿ ಇವರೇ ಬೆಂಕಿ ಹಚ್ಚಿದ್ದಾರೆ ಅಂತ ಬೊಟ್ಟು ಮಾಡಿದ್ರು. ಇದಕ್ಕೆ ಕಾರಣ ಅದೇ ದಿನ ಊರಿನಲ್ಲಿ ನಡೆದಿದ್ದ ಸಣ್ಣದೊಂದು ರಾಜಕೀಯ ಕಿರಿಕ್. ಇದೇ ಕಾರಣಕ್ಕೆ ಯತೀಶ್ ಬೆಂಕಿ ಹಚ್ಚಿರಬಹುದೆಂದು ಪೊಲೀಸ್ರು ವಿಚಾರಣೆ ನಡೆಸಿದ್ರು. ಪೊಲೀಸ್ರ ಚಾಕಚಕ್ಯತೆ ಹಾಗೂ ಸಮಯಪ್ರಜ್ಞೆಯಿಂದ ಅಸಲಿ ಆರೋಪಿಗಳು ಪತ್ತೆಯಾಗಿದ್ದಾರೆ.
ಅಷ್ಟಕ್ಕೂ ಬೈಕ್ ಗಳಿಗೆ ಬೆಂಕಿ ಹೆಚ್ಚಿದ್ದು ಯತೀಶ್ ಆಗಲಿ ಗ್ರಾಮದ ಗ್ರಾಮಸ್ಥರಾಗಲಿ ಅಲ್ಲ. ಮದುವೆ ಮನೆಯಲ್ಲಿದ್ದ ವಧುವಿನ ಹಳೇ ಲವರ್. ಎಸ್ ಹುಡುವಿ ಮದುವೆ ಆಗ್ಲಿಲ್ಲ ಅಂತ ಹರೀಶ್ ಎಂಬಾತ ಮದುವೆ ಆಗ್ತದ್ದ ಹುಡುಗಿ ಚಿಕ್ಕಪ್ಪನ ಬೈಕ್ ಗೆ ಬೆಂಕಿ ಇಟ್ಟಿದ್ದ. ಹರೀಶನ ಜೊತೆಗೆ ಕೀರ್ತಿ ಮತ್ತು ಸುಬ್ರಮಣಿ ಕೂಡ ಸಾಥ್ ನೀಡಿದ್ರು. ಪಾಗಲ್ ಪ್ರೇಮಿಯ ಈ ಹುಚ್ಚಾಟಕ್ಕೆ ಒಂದು ಕ್ಷಣ ದ್ಷೇದ ಬೆಂಕಿ ಇಡೀ ಊರಿಗೆ ಆವರಿಸಿತ್ತಿ ಸದ್ಯ ತಾವರೆಕೆರೆ ಪೊಲೀಸ್ರ ತನಿಖೆಯಿಂದ ಪಾಗಲ್ ಪ್ರೇಮಿ ಬಂಧನವಾಗಿ ಜೈಲುಸೇರಿದ್ದಾರೆ.
ವರದಿ : ನ್ಯಾನಪ್ಪನಹಳ್ಳಿ ಆರ್ ವೆಂಕಟೇಶ್.