ಬೆಂಗಳೂರು : ಇಂದು ಹೊಸ ವರ್ಷದ ಹಿನ್ನೆಲೆ ಪ್ರೇಮಿಗಳ ಸ್ವರ್ಗ ಎಂತಲೇ ಖ್ಯಾತಿಯಾಗಿರುವ ವಿಶ್ವ ವಿಖ್ಯಾತ ನಂದಿ ಗಿರಿಧಾಮಕ್ಕೆ ಜನ ಸಾಗರವೇ ಹರಿದು ಬಂದಿತ್ತು. ನಿನ್ನೆ ಸಂಜೆ ಆರು ಗಂಟೆಯಿಂದ ಇಂದು ಬೆಳಗ್ಗೆ ಆರು ಗಂಟೆಯವೆರಗೂ ನಂದಿ ಬೆಟ್ಟ ಪ್ರವೇಶಕ್ಕೆ ನಿರ್ಬಂಧ ಏರಲಾಗಿತ್ತು.
ಇಂದು ಬೆಳಗ್ಗೆ ಆರು ಗಂಟೆಗೆ ನಂದಿ ಬೆಟ್ಟದ ಬಾಗಿಲು ಓಪನ್ ಆಗಿದ್ದೇ ತಡ ಸೂರ್ಯೋದಯ ವೀಕ್ಷಣೆ ಮಾಡಲು ಲಕ್ಷಾಂತರ ಪ್ರವಾಸಿಗರು ಏಕಾಏಕಿ ನಂದಿಬೆಟ್ಟ ನುಗ್ಗಿದ್ರು. ಆದ್ರಿಂದ ಕಿಮೀ ಗಟ್ಟಲೇ ಟ್ರಾಫಿಕ್ ಜಾಮ್ ಆಗಿತ್ತು ,ಇನ್ನೂ ಬೆಟ್ಟದ ಮೇಲೆಯೂ ಪಾರ್ಕಿಂಗ್ ಸ್ಲಾಟ್ ಹೌಸ್ ಫುಲ್ ಆಗಿತ್ತು.
ಜನರನ್ನು ನಿಯಂತ್ರಿಸಲು ಪೊಲೀಸರು ಹಾಗು ಕೆಎಸ್ ಟಿಡಿಸಿ ಸಿಬ್ಬಂದಿ ಹರಸಾಹಸ ಪಡಬೇಕಾಯಿತು ,ಇದರ ನಡುವೆಯೂ ಪ್ರೇಮಿಗಳು ಹೊಸವರ್ಷವನ್ನು ನಂದಿಬೆಟ್ಡದ ಮೇಲೆ ಎಂಜಾಯ್ ಮಾಡುತ್ತಿದ್ದಾರೆ.