Breaking News CM ಸಿದ್ದರಾಮಯ್ಯ ಪರ ಅಶೋಕ್ ಬ್ಯಾಟಿಂಗ್.!National & International News

ಸಿರಿಯಾ, ಟರ್ಕಿಯಲ್ಲಿ ಪ್ರಬಲ ಭೂಕಂಪನ- 360 ಮಂದಿ ದುರ್ಮರಣ- ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ

ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿರುವ ಪ್ರಭಲ ಭೂಕಂಪದಿಂದ ಸಾವು, ನೋವುಗಳು ಮತ್ತಷ್ಟು ಹೆಚ್ಚಾಗಿದೆ. ಇದುವೆರೆಗೆ ಸಿಕ್ಕ ಮಾಹಿತಿ ಪ್ರಕಾರ, ಒಟ್ಟು 360 ಜನರು ಸಾವನ್ನಪ್ಪಿದ್ದಾರೆ.

ಟರ್ಕಿ (Turkey) ಮತ್ತು ಸಿರಿಯಾ (Syria) ದಲ್ಲಿ ಸಂಭವಿಸಿರುವ ಪ್ರಭಲ ಭೂಕಂಪದಿಂದ ಸಾವು, ನೋವುಗಳು ಮತ್ತಷ್ಟು ಹೆಚ್ಚಾಗಿದೆ. ಇದುವೆರೆಗೆ ಸಿಕ್ಕ ಮಾಹಿತಿ ಪ್ರಕಾರ, ಒಟ್ಟು 360 ಜನರು ಸಾವನ್ನಪ್ಪಿದ್ದಾರೆ. ಇಂದು ಮುಂಜಾನೆ ದಕ್ಷಿಣ ಟರ್ಕಿಯಲ್ಲಿ ಸಂಭವಿಸಿದ ಭೂಕಂಪನ (Earth quake) ದ ತೀವ್ರತೆಯು ರಿಕ್ಟರ್ ಮಾಪಕದಲ್ಲಿ 7.8 ದಾಖಲಾಗಿದೆ. ಟರ್ಕಿಯ ಸ್ಥಳೀಯ ಮಾಧ್ಯಮಗಳು ಮಾಡಿರುವ ವರದಿ ಪ್ರಕಾರ, ಇದುವೆರೆಗೆ 100 ಮೃತದೇಹಗಳನ್ನು ಅವಶೇಷಗಳಡಿಯಿಂದ ತೆಗೆಯಲಾಗಿದೆ.

 

ಸುಮಾರು 440ಕ್ಕೂ ಹೆಚ್ಚು ಜನರು ಕಣ್ಮರೆಯಾಗಿದ್ದು, ಅವರಿಗಾಗಿ ಹುಡುಕಾಟ ನಡೆದಿದೆ. ಸುಮಾರು 130ಕ್ಕೂ ಹೆಚ್ಚು ಮನೆಗಳು ಮಲಟ್ಯಾ (malatya)  ಪ್ರಾಂತ್ಯವೊಂದರಲ್ಲೇ ನೆಲಸಮವಾಗಿವೆ. ಬಂಡುಕೋರರ ಹಿಡಿತದಲ್ಲಿರುವ ವಾಯುವ್ಯ ಸಿರಿಯಾದಲ್ಲಿ ಪರಿಸ್ಥಿತಿ ವಿನಾಶಕಾರಿಯಾಗಿದೆ. ಹಲವಾರು ಕಟ್ಟಡಗಳು ನೆಲಸಮಗೊಂಡಿದ್ದು, ಜನರು ಅವಶೇಷಗಳಡಿಯಲ್ಲಿ ಸಿಲುಕಿಕೊಂಡಿದ್ದಾರೆ. ಕಟ್ಟಡಗಳನ್ನು ತೊರೆದು, ತೆರೆದ ಖಾಲಿ ಪ್ರದೇಶದಲ್ಲಿ ಸೇರುವಂತೆ ನಾಗರಿಕರಿಗೆ ರಕ್ಷಣಾ ತಂಡಗಳು ಸೂಚಿವೆ. ಇದನ್ನೂ ಓದಿ : –  ಬೆಂಗಳೂರು ತಂತ್ರಜ್ಞಾನದ ಹಬ್ ಆಗಿದೆ – ಭಾರತದ ಆರ್ಥಿಕತೆಯನ್ನ ಕೊಂಡಾಡಿದ ಪ್ರಧಾನಿ ಮೋದಿ

ಟರ್ಕಿಯು ಆಗಾಗ್ಗೆ ಭೂಕಂಪಗಳಿಂದ ನಡುಗುತ್ತದೆ. ಲೆಬನಾನ್ ಮತ್ತು ಸಿರಿಯಾದಲ್ಲೂ ಭೂಕಂಪದ ಅನುಭವವಾಗಿದೆ. ಟರ್ಕಿಯಲ್ಲಿ ಸಂಭವಿಸಿದ ಭೂಕಂಪದಿಂದ ಪ್ರಾಣಹಾನಿ ಮತ್ತು ಆಸ್ತಿಪಾಸ್ತಿ ಹಾನಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra modi) ಹೇಳಿದ್ದಾರೆ. ಅಗಲಿದ ಕುಟುಂಬಗಳಿಗೆ ಸಂತಾಪ ಸೂಚಿಸಿರುವ ಅವರು. ಗಾಯಾಳುಗಳು ಬೇಗ ಚೇತರಿಸಿಕೊಳ್ಳಲಿ. ಭಾರತವು ಟರ್ಕಿಯ ಜನರೊಂದಿಗೆ ಒಗ್ಗಟ್ಟಿನಿಂದ ನಿಂತಿದೆ ಮತ್ತು ಈ ದುರಂತವನ್ನು ನಿಭಾಯಿಸಲು ಸಾಧ್ಯವಿರುವ ಎಲ್ಲ ನೆರವು ನೀಡಲು ಸಿದ್ಧವಾಗಿದೆ ಎಂದು ಮೋದಿ ತಿಳಿಸಿದ್ದಾರೆ.

ಇದನ್ನೂ ಓದಿ : –  ದೇಶದ EV ರಾಜಧಾನಿ ಕರ್ನಾಟಕ- ಬಸವರಾಜ ಬೊಮ್ಮಾಯಿ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!