ಯಾದಗಿರಿ : ಜಿಲ್ಲೆಯ ವಡಗೇರಾ ತಾಲೂಕಿನ ಕೊಂಕಲ್ ಗ್ರಾಮದಲ್ಲಿ ಆಕಸ್ಮಿಕ ಬೆಂಕಿ ತಗುಲಿ ಕಬ್ಬಿನಗದ್ದೆ ಹೊತ್ತಿ ಉರಿದ ಘಟನೆ ಬೆಳಕಿಗೆ ಬಂದಿದೆ.
4 ಎಕರೆ ಜಮೀನಿನಲ್ಲಿ ಬೆಳೆದಿದ್ದ ಕಬ್ಬು ಬೆಳೆ ಬೆಂಕಿಯ ಕೆನ್ನಾಲೆಗೆಯಲ್ಲಿ ಹೊತ್ತಿ ಉರಿದಿದೆ. ಕೊಂಕಲ್ ಗ್ರಾಮದ ಯಂಕಣ್ಣ ಅಗಸರ ಎಂಬುವರಿಗೆ ಸೇರಿದ ಜಮೀನು ಎಂದು ಗುರುತಿಸಲಾಗಿದೆ.
ಕಟಾವಿಗೆ ಬಂದಿದ್ದ 4 ಎಕರೆ ಕಬ್ಬು ಬೆಳೆಗೆ ಬೆಂಕಿಗೆ ಆಹುತಿಯಾಗಿದೆ. ಬೆಂಕಿ ನಂದಿಸುವಲ್ಲಿ ಸ್ಥಳೀಯರು ಹರಸಾಹಸ ಪಡುತ್ತಿದ್ದಾರೆ.
ಬೆಂಕಿ ಆಹುತಿಯಿಂದ ಬರೊಬ್ಬರಿ 3 ಲಕ್ಷದಷ್ಟು ಹಣ ನಷ್ಟವಾಗಿದೆ ಎಂದು ವರದಿಯಾಗಿದೆ. ಈ ಘಟನೆ ವಡಗೇರಾ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿನಡೆದಿದೆ.