Breaking News CM ಸಿದ್ದರಾಮಯ್ಯ ಪರ ಅಶೋಕ್ ಬ್ಯಾಟಿಂಗ್.!CinemaState News

ಸಾರ್ವಜನಿಕವಾಗಿ ಕೈಯಲ್ಲಿ ʻಬೆಳ್ಳಿ ಲಾಂಗ್‌ʼ ಹಿಡಿದು ಪೋಸ್‌ ಕೊಟ್ಟ ನಟ ದರ್ಶನ್‌

ಬೆಂಗಳೂರು : ನಾಯಿಯೊಂದು ಮಹಿಳೆಯೊಬ್ಬರಿಗೆ ಕಚ್ಚಿದ ಪ್ರಕರಣದಲ್ಲಿ ಚಿತ್ರ ನಟ ದರ್ಶನ್‌ ಸುದ್ದಿಯಾದ ಬೆನ್ನಲ್ಲೆಇದೀಗ ಮತ್ತೊಂದು ವಿವಾದ ಬೆಳಕಿಗೆ ಬಂದಿದೆ.

ಬೆಂಗಳೂರಿನ ಜಯನಗರದ ನಾಲ್ಕನೇ ಬ್ಲಾಕ್‌ನಲ್ಲಿ ಅಖಿಲ ಕರ್ನಾಟಕ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆಳೆಯರ ಬಳಗ ವತಿಯಿಂದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ.

ಈ ಕಾರ್ಯಕ್ರಮಕ್ಕೆ ಬಂದ ದರ್ಶನ್‌ಗೆ ಅಭಿಮಾನಿಗಳು ತಮ್ಮ ಪ್ರೀತಿಯ ದ್ಯೋತಕವಾಗಿ ಕೈಯಲ್ಲಿ ಬೆಳ್ಳಿಯ ಲಾಂಗ್‌ ಹಿಡಿಯು ಕೊಟ್ಟಿದ್ದಾರೆ ಅದನ್ನು ನಟ ದರ್ಶನ್‌ ಕೈನಲ್ಲಿ ಹಿಡಿದುಕೊಂಡು ಪೋಸ್‌ ನೀಡಿದ್ದಾರೆ. ಅಲ್ಲದೇ ದರ್ಶನ್‌ ಜತೆಗಿದ್ದ ಅಭಿಷೇಕ್‌ ಅಂಬರೀಷ್‌ ಅವರಿಗೆ ಬೆಳ್ಳಿಯ ಕಿರೀಟ ನೀಡಿದ್ದಾರೆ.

ಈ ವಿಡಿಯೋ ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಆಗುತ್ತಿದಂತೆ ಸಾರ್ವಜನಿಕವಾಗಿ ಮಾರಕಾಸ್ತ್ರಗಳನ್ನು ಪ್ರದರ್ಶಿಸುವುದು ತಪ್ಪು ಸಂದೇಶ ನೀಡುತ್ತದೆ ಎಂದು ಶಸ್ತ್ರಾಸ್ತ್ರ ಕಾಯಿದೆಯಡಿ ಪ್ರಕರಣ ದಾಖಲಿಸಿಕೊಳ್ಳಲೂ ಅವಕಾಶವಿದೆ ಎನ್ನುವುದು ಇನ್ನೊಂದು ಚರ್ಚೆಗೆ ಗ್ರಾಸವಾಗಿದೆ.

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!