ಅನಿತಾ ಕುಮಾರಸ್ವಾಮಿ (ANITHA KUMARASWAMY)ಚಿಕ್ಕಬಳ್ಳಾಪುರ ಜಿಲ್ಲೆಯಿಂದ ಸ್ಫರ್ಧೆ ಎಂಬ ಸುಧಾಕರ್ ಹೇಳಿಕೆಗೆ ಚಿಕ್ಕಬಳ್ಳಾಪುರಲ್ಲಿ ಸಚಿವ ಸುಧಾಕರ್ (SUDHAKAR )ವಿರುದ್ದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ (H.D KUMARASWAMY) ಕಿಡಿಕಾರಿದ್ದಾರೆ.
ಸುಧಾಕರ್ ಚಿಲ್ಲರೆ ರಾಜಕಾರಣ ಮಾಡೋದನ್ನಾ ಬಿಡಬೇಕು. ಅವರಿಗೆ ಹಣದ ಮದ ಹೇರಿದೆ. ಎಂದು ಗುಡುಗಿದ್ದಾರೆ. ನನಗೇನು ಹುಚ್ಚಾ ಅನಿತಾ ಕುಮಾರಸ್ವಾಮಿ ಅವರನ್ನು ಇಲ್ಲಿ ನಿಲ್ಲಿಸೋಕೆ. ಕಾಂಗ್ರೆಸ್, ಬಿಜೆಪಿ ನಾಯಕರಿಗೆ ಜೆಡಿಎಸ್ ಚರಿತ್ರೆ ಗೊತ್ತಿಲ್ಲ. ನಮ್ಮ ಬಗ್ಗೆ ಬಾಯಿಗೆ ಬಂದ ಹಾಗೇ ಮಾತಾಡೋದು ಬಿಡಬೇಕು. ಇದನ್ನುಓದಿ :- ಫ್ರೆ.6 ರಂದು ರಾಜ್ಯಕ್ಕೆ ಪ್ರಧಾನಿ ಮೋದಿ ಭೇಟಿ ಹಿನ್ನೆಲೆ – ಕೆ.ಬಿ ಕ್ರಾಸ್ ನಿಂದ ನಿಟ್ಟೂರುವರೆಗಿನ ಮಾರ್ಗ ಬದಲು
ಕೃಷ್ಣಭೈರೇಗೌಡ (KRISHNA BYREGOWDA ) ಅವರೇ ನಿಮ್ಮ ತಂದೆ ಜೆಡಿಎಸ್ ಜೊತೆ ಹೇಗಿದ್ರು ಅಂತಾ ನಿಮ್ಮ ತಾಯಿಯನ್ನು ಕೇಳಿ ನೋಡಿ. ಅವರಿನ್ನು ಜೀವಂತವಾಗಿದ್ದಾರೆ ಒಮ್ಮೆ ಕೇಳಿ ನೋಡಿ. ಕೋಲಾರಕ್ಕೆ ನಿಮ್ಮ ಕೊಡುಗೆ ಏನು..? ಎಂದು ಪ್ರಶ್ನಿಸಿದ್ದಾರೆ.
ಇದನ್ನುಓದಿ :- ಡಿಕೆಶಿ, ಸಿದ್ದರಾಮಯ್ಯ ನಡೆಗೆ ಪರಮೇಶ್ವರ್ ಬೇಸರ! ಕುತೂಹಲ ಕೆರಳಿಸಿದ ಸುರ್ಜೇವಾಲ ಭೇಟಿ