ಬಿಜೆಪಿ ( BJP) ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದರೆ ಪ್ರಹ್ಲಾದ್ ಜೋಶಿ (Pralhad Joshi) ಮುಖ್ಯಮಂತ್ರಿ ಆಗಬಹುದು. ಪ್ರಲ್ಹಾದ್ ಜೋಶಿ ಕರ್ನಾಟಕದ ಬ್ರಾಹ್ಮಣ ಮೂಲದವರಲ್ಲ. ಮಹಾರಾಷ್ಟ್ರದಿಂದ ವಲಸೆ ಬಂದ ಪೇಶ್ವೆಗಳ ವಂಶಸ್ಥರು ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಹೇಳಿಕೆ ರಾಜ್ಯದಲ್ಲಿ ಸಂಚಲನ ಮೂಡಿಸಿದೆ.
ವಿವಾದಕ್ಕೆ ಸಂಬಂಧಿಸಿದಂತೆ ಮಾತನಾಡಿದ ಹೆಚ್ಡಿಕೆ ನಾನು ಪ್ರಹ್ಲಾದ್ ಜೋಶಿ ವಿರೋಧಿ ಅಲ್ಲ. ಜೋಶಿ ಅವರನ್ನು ಮುಖ್ಯಮಂತ್ರಿ ಮಾಡುವುದಾದರೆ ಚುನಾವಣೆಗೆ ಮೊದಲೇ ಘೋಷಣೆ ಮಾಡಲಿ. ನಾನು ಯಾವುದೇ ಸಮುದಾಯದ ವಿರೋಧಿ ಅಲ್ಲ. ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಯಾರೊಬ್ಬರು ಮುಖ್ಯಮಂತ್ರಿಯಾಗಲೂ ನನ್ನ ವಿರೋಧವಿಲ್ಲ. ಮುಖ್ಯಮಂತ್ರಿ ಆಗಲು ಅರ್ಹತೆ ಇರುವವರು ಬ್ರಾಹ್ಮಣರಲ್ಲೂ ಇದ್ದಾರೆ’ ಎಂದು ಕುಮಾರಸ್ವಾಮಿ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ : – ಮತಾಂಧರು ಪಠಾಣ್ ನ ಬ್ಯಾನ್ ಮಾಡಲು ಬಯಸಿದ್ದರು – ಪ್ರಕಾಶ್ ರಾಜ್
‘ಬಿಜೆಪಿಯಲ್ಲಿ ಈಗಾಗಲೇ ಬಿ.ಎಸ್.ಯಡಿಯೂರಪ್ಪ (Yediyurappa) ರನ್ನು ಸೈಡ್ಲೈನ್ ಮಾಡಲಾಗಿದೆ. ಜಗದೀಶ್ ಶೆಟ್ಟರ್ (Jagadish shetter) ಅವರನ್ನು ಅಮಿತ್ ಶಾ (Amith shah) ಕಾರ್ಯಕ್ರಮದ ವೇದಿಕೆಯಿಂದ ಹೊರಗಿಡಲಾಗಿತ್ತು. ಚುನಾವಣೆ ಮುಗಿದ ಮೇಲೆ ಜೋಶಿ ಸಿಎಂ ಆಗುತ್ತಾರೆಂಬ ಮಾಹಿತಿ ನನಗೆ ಸಿಕ್ಕಿದೆ. ಬಿಜೆಪಿ ಸರ್ಕಾರದಲ್ಲಿ 8 ಮಂದಿಯನ್ನು ಉಪಮುಖ್ಯಮಂತ್ರಿ ಮಾಡುವ ಬಗ್ಗೆಯೂ ಚರ್ಚೆಯಾಗಿದೆ. ಆ 8 ಜನ ಯಾರು ಎಂಬುದೂ ನನಗೆ ಗೊತ್ತಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : – BJP ಜತೆ ಗುರುತಿಸಿಕೊಂಡಿದ್ದ ವಕೀಲೆಗೆ ಜಡ್ಜ್ ಆಗಿ ಬಡ್ತಿ- ವ್ಯಾಪಕ ವಿರೋಧ