ರಾಯಚೂರು : ಕರೋನ ವೈರಸ್ ಮುಗಿದು ಎರಡು ವರ್ಷ ಕಳೆಯುವಷ್ಟರಲ್ಲಿ, ಮತ್ತೊಂದು ವೈರಸ್ ಚೀನಾದಲ್ಲಿ ಕಾಣಿಸಿಕೊಂಡಿದೆ. ಕೇಂದ್ರ ಸರ್ಕಾರ ಐದು ರಾಜ್ಯಗಳಿಗೆ ಹೈಅಲರ್ಟ್ ಘೋಷಣೆ ಬೆನ್ನಲ್ಲೇ ಜಿಲ್ಲಾಡಳಿತ ಎಲ್ಲಾ ಸಿದ್ದತೆ ಗಳು ನಡೆಸಿಕೊಳ್ಳುತ್ತಿವೆ .
ಚೀನಾದಲ್ಲಿ ನ್ಯುಮೋನಿಯಾ ಪ್ರಕರಣ ಹೆಚ್ಚಳ ಹಿನ್ನೆಲೆ ರಾಜ್ಯ ಸರ್ಕಾರದ ಮಾರ್ಗ ಸೂಚನೆ ಪ್ರಕಾರ ರಾಯಚೂರು ಜಿಲ್ಲೆಯಲ್ಲಿ ಮುನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳಲಾಗಿದೆ. ಚೀನಾದಲ್ಲಿ ನ್ಯುಮೋನಿಯಾ ಪ್ರಕರಣ ಹೆಚ್ಚಳ ವಿಚಾರ ಬಹಿರಂಗವಾಗುತ್ತಿದ್ದಂತೆ ರಾಯಚೂರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ವೈದ್ಯರ ಜೊತೆ ಸಭೆ ಮಾಡಲಾಗಿದೆ. ತಾಲ್ಲೂಕು ಅಧಿಕಾರಿಗಳು ಮತ್ತು ವೈದ್ಯರ ಜೊತೆ ಜೂಮ್ ಮೀಟಿಂಗ್ ಮಾಡಿ ಸಲಹೆ ನೀಡಿದರು.
ಇನ್ನೂ ಎಲ್ಲಾ ತಾಲ್ಲೂಕು ಆಸ್ಪತ್ರೆಗಳಲ್ಲಿ ವೆಂಟಲೇಟರ್ , ಬೆಟ್ ವ್ಯವಸ್ಥೆಗೆ ಸಿದ್ಧತೆ ಗೆ ಸೂಚನೆ ನೀಡಿದರು . ಕರೋನ ಸಮಯದಲ್ಲಿ ಅವ್ಯವಸ್ಥೆ ಆಗಿತ್ತು , ಆದರೆ ಈ ಸಮಯದಲ್ಲಿ ಯಾವುದು ತೊಂದರೆಯಾಗದಂತೆ ಮಾರ್ಗ ಸೂಚಿ ನೀಡಿದರು. ಇನ್ನೂ ಖಾಸಗಿ ಆಸ್ಪತ್ರೆಗಳಲ್ಲಿ ಯಾವುದಾದರೂ ಪ್ರಕರಣಗಳು ಕಂಡು ಬಂದಲ್ಲಿ ತಕ್ಷಣ ಜಿಲ್ಲಾ ಆರೋಗ್ಯ ಇಲಾಖೆಗೆ ಮಾಹಿತಿ ನೀಡಬೇಕು ಎಂದು ಹೇಳಿದರು .
ಬಳಿಕ ಡಿಎಚ್ಓ ಮಾತನಾಡಿ, ಚಳಿಗಾಲದಲ್ಲಿ ಬರುವಂತ ವೈರಸ್ ಇದಾಗಿದೆ. ಸಾರ್ವಜನಿಕರು ಗುಂಪು ಗುಂಪಾಗಿ ಇರಬಾರದು. ಮುನ್ನೆಚ್ಚರಿಕಾ ಕ್ರಮವಾಗಿ ಆರೋಗ್ಯ ಇಲಾಖೆ ಎಲ್ಲಾ ಸಿದ್ದತೆ ಮಾಡಿಕೊಂಡಿದೆ ಎಂದಿದ್ದಾರೆ.
ಅಲ್ಲದೇ ನ್ಯುಮೋನಿಯಾ ದೇಹಗಳಲ್ಲಿ 5-7 ದಿನಗಳವರೆಗೆ ಇರುತ್ತದೆ. ಚಿಕ್ಕ ಮಕ್ಕಳು, ವೃದ್ಧರು , ಗರ್ಭಿಣಿಯರು ಎಚ್ಚರಿಕೆಯಿಂದ ಇರಬೇಕು. ನೆಗಡಿ ಕೆಮ್ಮು ಜ್ವರ ಹಾಗೂ ಮೈ ಕೈ ನೋವು ಕಾಣಿಸಿ ಕೊಂಡಲ್ಲಿ ನಿರ್ಲಕ್ಷ್ಯ ಬೇಡ ಆದಷ್ಟು ವೈದ್ಯರ ಸಲಹೆ ತೆಗೆದು ಕೊಳ್ಳಿ ಎಂದರು.
ಹೊಸ ಸೊಂಕು ಹೆದರಿಸೊಕ್ಕೆ ಎಲ್ಲಾ ಆಸ್ಪತ್ರೆಗಳಿಗೆ ಡಿ ಎಚ್ಓ ಎಚ್ಚರಿಕೆಯನ್ನು ನೀಡಿದ್ದಾರೆ. ಇನ್ನೂ ಗ್ರಾಮಗಳಲ್ಲಿ ಆಶಾ ಕಾರ್ಯಕರ್ತರು ಮಕ್ಕಳಲ್ಲಿ ,ವೃದ್ಧರಲ್ಲಿ , ಗರ್ಭಿಣಿಯಲ್ಲಿ ಇಂತಹ ಪ್ರಕರಣಗಳು ಕಂಡು ಬಂದಲ್ಲಿ ತಕ್ಷಣ ಆರೋಗ್ಯ ಕೇಂದ್ರಗಳೊಗೆ ರವಾನೆ ಮಾಡಬೇಕು ಎಂದು ಸೂಚನೆ ನೀಡಲಾಗಿದೆ ಎಂದರು .
ಮತ್ತೆ ಚೀನದಲ್ಲಿ ನ್ಯುಮೋನಿಯಾ ವೈರಸ್ ಕಾಣಿಸಿ ಕೊಂಡಿದ್ದು ರಾಜ್ಯದಲ್ಲಿ ಆತಂಕ ಸೃಷ್ಟಿಯಾಗಿದ್ದು. ಆರೋಗ್ಯ ಇಲಾಖೆಗೆ ಟೆನ್ಶನ್ ಶುರುವಾಗಿದೆ. ಯಾವೆಲ್ಲ ರೀತಿ ಸಿದ್ದತೆ ಮಾಡಿಕೊಳ್ಳುತ್ತಾರೆ ಅನ್ನೋದನ್ನು ಕಾದು ನೋಡಬೇಕಾಗಿದೆ. .
ವರದಿ : ಅನಿಲ್ ಕುಮಾರ್