ಬೆಂಗಳೂರು : ನಗರದ ಬನಶಂಕರಿಯಿಂದ ಕೋಣನಕುಂಟೆ ಮಾರ್ಗವಾಗಿ ಕಾರ್ಯಾಚರಿಸುತ್ತಿರುವ ಬಿಎಂಟಿಸಿ ಡಿಪೋ ಗೆ ಎಂಡಿ ಜಿ. ಸತ್ಯವತಿ ಭೇಟಿ, ಪರಿಶೀಲನೆ ನಡೆಸಿದ್ದಾರೆ.
ಬಿಎಂಟಿಸಿ(BMTC) ಎಂಡಿ ಜಿ. ಸತ್ಯವತಿ ‘ಬನಶಂಕರಿ ಡಿಪೋಗೆ ಭೇಟಿ ನೀಡಿ ಕಂಡಕ್ಟರ್, ಡ್ರೈವರ್ ಮತ್ತು ಮೆಕ್ಯಾನಿಕ್ಗಳ ಕುಂದುಕೊರತೆಗಳನ್ನು ಆಲಿಸಿದ್ದಾರೆ. ಅಷ್ಟೇ ಅಲ್ಲದೇ ಚಾಲಕ ಮತ್ತು ನಿರ್ವಾಹಕರಿಗೆ ತಿಳುವಳಿಕೆ ಕೂಡ ನೀಡಿದ್ದಾರೆ. ಪ್ರಯಾಣಿಕರ ಅಹವಾಲುಗಳನ್ನು ಆಲಿಸಿದ ಅವರು, ‘ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿರುತ್ತಾರೆ ಐದು ಅಂಶಗಳ ಮೇಲೆ ಕಾರ್ಯನಿರ್ವಹಿಸುವ ಚಾಲನಾ ಸಿಬ್ಬಂದಿಗಳನ್ನು ಪ್ರಶಂಸಿದ್ದಾರೆ ಆ ಐದು ಅಂಶಗಳಾವುವುದು ಗೊತ್ತಾ ಇಲ್ಲಿದೆ…..
ನಿರ್ವಾಹಕರು ಶಕ್ತಿ ಯೋಜನೆ ಅಡಿಯಲ್ಲಿ ಮಹಿಳಾ ಪ್ರಯಾಣಿಕರಿಗೆ ವಾಹನಗಳಲ್ಲಿ ಚೀಟಿ ವಿತರಣೆ.
ನಿರ್ವಾಹಕರು ಮಹಿಳಾ ಪ್ರಯಾಣಿಕರೊಂದಿಗೆ ಸೌಜನ್ಯದಿಂದ ವರ್ತನೆ.
ನಿರ್ವಾಹಕರು ಶಕ್ತಿ ಯೋಜನೆ ಅಡಿಯಲ್ಲಿ ದಾಖಲಾತಿಗಳನ್ನು ಪರಿಶೀಲನೆ
ನಿರ್ವಾಹಕರು ವಾಹನಗಳಲ್ಲಿ ಪ್ರಯಾಣಿಸುವ ಎಲ್ಲಾ ಪ್ರಯಾಣಿಕರಿಗೆ ಚೀಟಿ ವಿತರಣೆ.
ಸಂಸ್ಥೆಯ ವಾಹನಗಳ ಸ್ವಚ್ಛತೆ. ಹೀಗೆ ಹಲವು ಮಾನದಂಡಗಳ ಮೇಲೆ ಚಾಲಕ ಹಾಗೂ ನಿರ್ವಾಹಕರನ್ನು ಬಿಎಂಟಿಸಿ ಎಂಡಿ ಸತ್ಯವತಿಯವರು ಪ್ರಶಂಸೆ ನೀಡಿದ್ದಾರೆ.