ಬೆಂಗಳೂರು : ಬಿಬಿಎಂಪಿ ಸಾರ್ವಜನಿಕರ ದುಡ್ಡು ಪೋಲು ಮಾಡೋಕೆ ಇರೋದು ಅಂತಾ ಮತ್ತೆ ಮತ್ತೆ ಸಾಬೀತಾಗಿದೆ. ಕೋಟಿ ಕೋಟಿ ಖರ್ಚು ಮಾಡಿ ಬಿಬಿಎಂಪಿ ಪಬ್ಲಿಕ್ ಟಾಯ್ಲೆಟ್ ನಿರ್ಮಾಣ ಮಾಡಿದೆ. ಆದ್ರೆ ಅವುಗಳ ಪರಿಸ್ಥಿತಿ ಅಂತೂ ಹೇಳತಿರದು. ಸರಿಯಾದ ನಿರ್ವಹಣೆ ಇಲ್ಲದೇ ಪಬ್ಲಿಕ್ ಟಾಯ್ಲೆಟ್ ಗಬ್ಬೆದ್ದು ನಾರುತ್ತಿದ್ರೆ ಇತ್ತ ಬಿಬಿಎಂಪಿ ಹೊಸ ಶೌಚಾಲಯ ನಿರ್ಮಿಸೋಕೆ ಮುಂದಾಗಿದೆ.
ಬಿಬಿಎಂಪಿ ಕೋಟಿ ಕೋಟಿ ಖರ್ಚು ಮಾಡಿ ಸಿಲಿಕಾನ್ ಸಿಟಿಯನ್ನು ಶೌಚಮುಕ್ತ ಸಿಟಿಯಾಗಿಸುವ ಉದ್ದೇಶದಿಂದ ನಿರ್ಮಿಸಲಾಗಿದ್ದ ಹೈಟೆಕ್ ಇ-ಶೌಚಾಲಯಗಳ ಸ್ಥಿತಿ ಹೇಳತಿರದು. ನಗರದಲ್ಲಿ 229 ಇ–ಶೌಚಾಲಯಗಳಿದ್ದು, ನಿರ್ವಹಣೆ ಇಲ್ಲದೆ ಪಾಳು ಬಿದ್ದಿವೆ.
ಇ-ಶೌಚಾಲಯಗಳ ನಿರ್ವಹಣೆಗೆ ಟೆಂಡರ್ ಆಹ್ವಾನಿಸಿದ್ದರೂ ಯಾರೂ ಮುಂದೆ ಬಂದಿಲ್ಲ. ಎರಡನೇ ಬಾರಿ ಟೆಂಡರ್ ಕರೆಯಲಾಗಿದೆ. ಬಸ್ ತಂಗುದಾಣಗಳ ಬಳಿ ಇ-ಶೌಚಾಲಯಗಳನ್ನು ಅಳವಡಿಸಲು ಬಿಬಿಎಂಪಿ ಪ್ಲಾನ್ ಏನೋ ಮಾಡ್ತಿದೆ. ಇನ್ನು ಶೀ ಟಾಯ್ಲೆಟ್ ನಿರ್ಮಾಣ ಮಾಡಲು ಬಿಬಿಎಂಪಿ ಮುಂದಾಗಿದೆ. ಆದ್ರೆ ಇರುವ ಶೌಚಾಲಯಗಳ ನಿರ್ವಹಣೆ ಮಾಡದೇ ಹೊಸದಾಗಿ ಶೌಚಾಲಯಗಳ ನಿರ್ಮಾನಕ್ಕೆ ಕೈ ಹಾಕ್ತಿರೋದು ದಡ್ಡತನವೇ ಎನ್ನಬಹುದು.
ಶೀ ಟಾಯ್ಲೆಟ್ ನಿರ್ಮಾಣಕ್ಕೆ 2 ಸಲ ಟೆಂಡರ್ ಕರೆದರೂ ಖಾಸಗಿ ಸಂಸ್ಥೆಗಳ ನಿರಾಸಕ್ತಿ ಎದ್ದುಕಾನುತ್ತಿದೆ. ಹೀಗಾಗಿ ಟಾಯ್ಲೆಟ್ ನಿರ್ಮಿಸಲು ಪಾಲಿಕೆಯಿಂದಲೇ ತಯಾರಿ ಪ್ಲಾನ್ ಆಗ್ತಿದೆ. ತಲಾ ಒಂದು ಶೀ ಟಾಯ್ಲೆಟ್ ಗೆ 15 ರಿಂದ 20 ಲಕ್ಷ ವೆಚ್ಚ ತಗುಲಲಿದೆ. ಬಂಡವಾಳ ಹೂಡಿದ ಖಾಸಗಿ ಸಂಸ್ಥೆ ಅವರೇ ಶೀ ಟಾಯ್ಲೆಟ್ ನಿರ್ಮಾಣ ಮಾಡಿ, ಅದರ ಮೇಲೆ ಜಾಹಿರಾತು ಅಳವಡಿಕೆ ಮಾಡುವ ಮೂಲಕ ಆದಾಯ ಗಳಿಸಬೇಕಿತ್ತು. ಶೀ ಟಾಯ್ಲೆಟ್ ಗೆ ಬಿಬಿಎಂಪಿ ನೀಡುವ ಜಾಗ ಕಡಿಮೆ ಇರುವ ಕಾರಣ ಹಾಗೂ ಜಾಹಿರಾತು ನಿಯಮ ಬಿಗಿ ಇರುವ ಕಾರಣ ಖಾಸಗಿ ಸಂಸ್ಥೆಗಳು ಇದಕ್ಕೆ ಮುಂದೆ ಬಂದಿಲ್ಲ. ಹೀಗಾಗಿ ಬಿಬಿಎಂಪಿಯೇ ಶೀ ಟಾಯ್ಲೆಟ್ ನಿರ್ಮಾಣ ಮಾಡಲು ಮುಂದಾಗಿದೆ.
ಶೀ ಟಾಯ್ಲೆಟ್ ನ ವಿಶೇಷತೆ ಏನು?
* ಮಹಿಳೆಯರಿಗೆ ಮೂತ್ರ ವಿಸರ್ಜನೆಗೆ ಅವಕಾಶ
* ಹಾಲುಣಿಸಲು ಶೀ ಟಾಯ್ಲೆಟ್ ನಲ್ಲಿ ವ್ಯವಸ್ಥೆ
* ಬಟ್ಟೆ ಬದಲಿಸಲು ಹಾಗೂ ಮಹಿಳೆಯರ ವಿಶ್ರಾಂತಿ ಪಡೆಯಲು ಶೀ ಟಾಯ್ಲೆಟ್ ಗಳ ನಿರ್ಮಾಣ
ಬಿಬಿಎಂಪಿ ವ್ಯಾಪ್ತಿಯಲ್ಲಿ ಸಾರ್ವಜನಿಕ ಶೌಚಾಲಯ ನಿರ್ವಹಣೆ ಮತ್ತು ಹೊಸದಾಗಿ ನಿರ್ಮಿಸಲು ಸಮಗ್ರ ಯೋಜನೆ ರೂಪಿಸಲು ಮುಖ್ಯ ಆಯುಕ್ತರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ನಗರದಲ್ಲಿ 255 ಸ್ಥಳಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಲು ಸ್ಥಳಗಳನ್ನು ಗುರುತಿಸಲಾಗಿದೆ. ಶೌಚಾಲಯ ನಿರ್ಮಿಸುವ ಸ್ಥಳ ವಿಶಾಲವಾಗಿರಬೇಕಿದ್ದು, ಕೇಂದ್ರ ಪ್ರದೇಶದಲ್ಲಿರಬೇಕು ಎಂದು ಹೇಳಿದ ಅವರು, ಹೊಸದಾಗಿ 46 ಶೌಚಾಲಯಗಳನ್ನು ನಿರ್ಮಾಣ ಮಾಡಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇನ್ನು ಸಿಟಿಯಲ್ಲಿ ಮಹಿಳೆಯರು ಹೆಚ್ಚಾಗಿ ಓಡಾಡುವ ಸ್ಥಳಗಳನ್ನು ಗುರುತಿಸಿ 100 ಶಿ ಟಾಯ್ಲೆಟ್ ಗಳನ್ನು ನಿರ್ಮಾಣ ಮಾಡ್ತಿರೊದೆನೊ ಒಳ್ಳೆಯ ಯೋಜನೆ. ಆದ್ರೆ ಇರುವ ಇ-ಶೌಚಾಲಯಗಳ ನಿರ್ವಹಣೆ ಕೂಡ ಅಷ್ಟೇ ಮಹತ್ವದಾಗಿದೆ. ಹೀಗೆ ಆದ್ರೆ ಸಾರ್ವಜನಿಕರ ಹಣ ಪೋಲಾಗೋದಂತು ಗ್ಯಾರಂಟಿ
ಅದೇನೇ ಇರಲಿ ಮಹಿಳೆಯರಿಗಾಗಿ ಶಿ ಟಾಯ್ಲೆಟ್ ಮಾಡ್ತಿರೋದು ಉತ್ತಮವೇ. ಇರುವ ಶೌಚಾಲಯಗಳ ನಿರ್ವಹಣೆ ಇಲ್ಲದೇ ಸುಖಾ ಸುಮ್ಮನೆ ಕೋಟಿ ಕೋಟಿ ಹಣ ವ್ಯಯವಾಗ್ತಿದೆ. ಬಿಬಿಎಂಪಿ ಇತ್ತ ಕೊಂಚ ಗಮನಹರಿಸಿ ಸರಿಯಾದ ಕ್ರಮ ಕೈಗೊಳ್ಳಬೇಕಿದೆ.
ವರದಿ : ಹರ್ಷಿತಾ ಪಾಟೀಲ್