ವಿವಿಧ ಕಾರ್ಯಕ್ರಮಗಳ ನಿಮಿತ್ತ ಪ್ರಧಾನಿ ನರೇಂದ್ರ ಮೋದಿ (Narendra modi) ಬೆಂಗಳೂರಿ (Bangalore) ಗೆ ಬಂದಿಳಿದಿದ್ದಾರೆ. ಈ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹಾಗೂ ಕೇಂದ್ರ ತೈಲ ಖಾತೆ ಸಚಿವ ಹರಿದೀಪ್ ಸಿಂಗ್ ಪುರಿ ಪ್ರಧಾನಿ ನರೇಂದ್ರ ಮೋದಿಯವರನ್ನು ಸ್ವಾಗತಿಸಿದರು.
Hon'ble Prime Minister Shri @NarendraModi ji Inaugurates "India Energy Week – 2023", Bengaluru. https://t.co/KODMx1hBRB
— Basavaraj S Bommai (@BSBommai) February 6, 2023
ಬೆಂಗಳೂರು ಹೊರವಲಯ ನೆಲಮಂಗಲದ ಮಾದವಾರದ ಬಿಐಇಸಿಯಲ್ಲಿ, ಇಂಡಿಯಾ ಎನರ್ಜಿ ವೀಕ್ (India energy week) 2023ಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಮೋದಿ ಅತ್ಯಂತ ವೇಗದಲ್ಲಿ ಬೆಳೆಯುತ್ತಿರುವ ಆರ್ಥಿಕತೆ ಭಾರತದ್ದು. ಹೊರಗಿನ ಪರಿಸ್ಥಿತಿ ಗಳು ಏನೇ ಇರಲಿ. ಆಂತರಿಕವಾಗಿ ಭಾರತ ಗಟ್ಟಿಯಾಗಿದೆ. ಸದೃಢ ಸರ್ಕಾರ, ನಿರಂತರ ಪರಿವರ್ತನೆ, ತಳಮಟ್ಟದಲ್ಲಿ ಸಾಮಾಜಿಕ ಆರ್ಥಿಕ ಪ್ರಾಬಲ್ಯ ಭಾರತವನ್ನು ಗಟ್ಟಿಯಾಗಿ ಇಟ್ಟಿದೆ ಎಂದು ಹೇಳಿದ್ರು. ಇದನ್ನೂ ಓದಿ : – ಅದಾನಿ ಷೇರು ಕುಸಿತದಿಂದ ದೇಶಕ್ಕೆ ಯಾವುದೇ ನಷ್ಟ ಇಲ್ಲ – ಪಿಯೂಷ್ ಗೋಯಲ್
ಇಂಧನ ವಲಯದಲ್ಲಿಯೂ ಭಾರತ ಮುಂಚೂಣಿಯಲ್ಲಿದೆ. ಬೆಂಗಳೂರು ತಂತ್ರಜ್ಞಾನದ ಹಬ್ ಆಗಿದೆ. ಭಾರತದಲ್ಲಿ ಮೊಬೈಲ್ ಉತ್ಪಾದನೆಯೂ ಹೆಚ್ಚಾಗಿದೆ ಎಂದು ಹೇಳಿದ್ರು. ಇನ್ನೂ ಬೆಂಗಳೂರಿನ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾದ ಬಳಿಕ ತುಮಕೂರಿಗೆ (Tumkuru) ಭೇಟಿ ನೀಡಲಿದ್ದಾರೆ.
https://youtube.com/live/cXxfA-8OkLE
ಇದನ್ನೂ ಓದಿ : – ಸಂಸತ್ತಿನಲ್ಲಿ ಪ್ರತಿಧ್ವನಿಸಿದ ಅದಾನಿ ವಿರೋಧಿ ಘೋಷಣೆ- ಉಭಯ ಸದನಗಳು ಮುಂದೂಡಿಕೆ