ಬೆಂಗಳೂರು : ಕಳೆದ ಕೆಲವು ದಿನಗಳಿಂದ ಕರ್ನಾಟಕದಲ್ಲಿ ಡೆಂಗ್ಯೂ ಪ್ರಕರಣ ದಿನೇ ದಿನೇ ಹೆಚ್ಚಾಗ್ತಿದ್ದು, ಡೆಂಗ್ಯೂ ಪ್ರಕರಣಗಳ ಸಂಖ್ಯೆ 10,500ರ ಗಡಿ ದಾಟಿದೆ ಎಂದು ವರದಿಯಾಗಿದೆ.
ಸಿಲಿಕಾನ್ ಸಿಟಿಯಲ್ಲಿ ಡೆಂಗ್ಯೂ ರಣಕೇಕೆ ಹೆಚ್ಚಾಗಿದ್ದಲ್ಲದೇ, ಒಂದೇ ದಿನದಲ್ಲಿ ನೂರಕ್ಕೂ ಹೆಚ್ಚು ಡೆಂಗ್ಯೂ ಪ್ರಕರಣಗಳು ದೃಢಪಡುತ್ತಿದೆ ಅದರಲ್ಲೂ ಬೆಂಗಳೂರು ಒಂದರಲ್ಲೇ 5881 ಕ್ಕೂ ಹೆಚ್ಚು ಡೆಂಗ್ಯೂ ಪ್ರಕರಣಗಳು ದಾಖಲಾಗಿದೆ. ರಾಜ್ಯದಲ್ಲಿ 1ಲಕ್ಷಕ್ಕೂ ಹೆಚ್ಚು ಡೆಂಗ್ಯೂ ಶಂಕಿತರು ಪತ್ತೆಯಾಗಿದೆ ಅದರಲ್ಲಿ 70 ಸಾವಿರ ಮಂದಿಗೆ ರಕ್ತದ ಸ್ಯಾಂಪಲ್ ಪರೀಕ್ಷೆ ಒಳಪಡಿಸಲಾಗಿದೆ.
ಡೆಂಗ್ಯೂ ಸೊಳ್ಳೆ ಕಡಿತದಿಂದ ಹರಡುತ್ತದೆ. ಈಡಿಸ್ಟ್ ಈಜಿಪ್ಟಿ ಎಂಬ ಜಾತಿಯ ಸೊಳ್ಳೆಯು ಡೆಂಗ್ಯೂ ಹರಡಲು ಕಾರಣವಾಗುತ್ತದೆ. ಸೋಂಕಿತ ಸೊಳ್ಳೆಯು ಒಬ್ಬರಿಂದ ಒಬ್ಬರಿಗೆ ಕಚ್ಚುವ ಮೂಲಕ ರೋಗ ಹರಡಲು ಕಾರಣವಾಗುತ್ತದೆ.
ವಿಪರೀತ ಜ್ವರ, ತಲೆನೋವು, ಕಣ್ಣುಗಳ ಹಿಂಭಾಗದಲ್ಲಿ ನೋವು, ಆಯಾಸ, ಮೈಕೈನೋವು, ಚರ್ಮದಲ್ಲಿ ದದ್ದು ಉಂಟಾಗುವುದು, ವಾಂತಿ, ವಾಕರಿಕೆ ಮೊದಲಾದವು ಡೆಂಗ್ಯೂವಿನ ಲಕ್ಷಣಗಳಾಗಿವೆ .ಜ್ವರ ಬಂದ ತಕ್ಷಣ ಮನೆಯಲ್ಲಿ ಮಾತ್ರೆ ನುಂಗಿ ಸುಮ್ಮನಾಗಬೇಡಿ, ತಕ್ಷಣ ಆಸ್ಪತ್ರೆಗೆ ಹೋಗಿ ಎಂದು ವೈದ್ಯರು ಸಲಹೆ ನೀಡಿದ್ದಾರೆ.