ಬೆಂಗಳೂರು : ರುಚಿ ರುಚಿಯಾದ ಎಗ್ ಬುರ್ಜಿ, ಆಮ್ಲೆಟ್ ತಿನ್ನೋಕೆ ಮೊದಲು ಎಗ್ ಪ್ರಿಯರು ಒಮ್ಮೆ ಯೋಚ್ನೆ ಮಾಡ್ಬೇಕು, ಯಾಕೆಂದ್ರೆ ತರಕಾರಿ,ಬೇಳೆ ಕಾಳು ಹಾಗೂ ಅಕ್ಕಿ ಬೆಲೆ ಏರಿಕೆಯಿಂದ ಕಂಗೆಟ್ಟಿರೋ ಜನ್ರಿಗೆ ಇದೀಗ ಮೊಟ್ಟೆ ಕೂಡಾ ಬಿಗ್ ಶಾಕ್ ನೀಡಿದೆ.. ಇನ್ಮುಂದೆ ಮೊಟ್ಟೆನಾ ತಿನ್ಬೇಕೋ, ಬೇಡ್ವೋ ಅನ್ನೋ ಸ್ಥಿತಿ ಎದುರಾಗಿದೆ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಚಳಿಯ ಪ್ರಮಾಣ ಒಂಚೂರು ಜೋರಾಗಿದೆ.. ಹೇಗಿದ್ರೂ ಚಳಿ ಬಿಸಿ ಬಿಸಿಯಾಗಿ ಎನಾದ್ರೂ ತಿನ್ನೋಣ ಅಂದ್ಕೋಂಡು ಎಗ್ ಐಟಂ ಮಾಡ್ಬೇಕು ಅಂದ್ರೆ ನೀವು ಯೋಚ್ನೆ ಮಾಡ್ಲೇ ಬೇಕು.. ಯಾಕಂದ್ರೆ ಧಿಡೀರ್ ಅಂತಾ ಮೊಟ್ಟೆ ದರ ಏರಿಕೆ ಕಂಡಿದ್ದು, ಮೊಟ್ಟೆ ಪ್ರಿಯರಿಗೆ ನಿರಾಸೆ ಮೂಡಿಸಿದೆ.
ಈಗಾಗಲೇ ಎಲ್ಲೆಡೆ ತರಕಾರಿ,ಬೇಳೆ ಕಾಳು, ಅಕ್ಕಿಯ ಬೆಲೆ ಗಗನಕ್ಕೇರಿದ್ದು ಜನ ತತ್ತರಿಸಿ ಹೋಗಿದ್ದಾರೆ. ಇದರ ನಡುವೆ ಇದೀಗಾ ಮೊಟ್ಟೆಯ ಬೆಲೆಯು ಕೂಡ ಏರಿಕೆಯಾಗಿದೆ. ಹೌದು….ಎಗ್ ರೈಸ್ ಎಗ್ ಬುರ್ಜಿ ಎಂದರೆ ಎಲ್ಲರ ಬಾಯಲ್ಲೂ ನೀರು ಬರುತ್ತೆ ಇದರ ಜೊತೆಗೆ ದಿನೇ ದಿನೇ ಜಿಮ್‌ಗೆ ಹೋಗುವವರ ಸಂಖ್ಯೆ ಹೆಚ್ಚಾಗುತ್ತಿದೆ ಹೀಗಾಗಿ ಪ್ರೋಟಿನ್‌ಗಾಗಿ ಹೆಚ್ಚಿನ ಯುವಕರು ಮೊಟ್ಟೆಯನ್ನ ಅವಲಂಬಿಸಿರುತ್ತಾರೆ. ಇನ್ನೂ ಆದರೆ ಇದೀಗಾ ಮೊಟ್ಟೆ ಪ್ರಿಯರ ಜೇಬಿಗೂ ಕತ್ತರಿ ಬೀಳುತ್ತಿದ್ದು, ಮೊಟ್ಟೆ ಬೆಲೆ ಒಮ್ಮೇಲೆ ಹೆಚ್ಚಾಗಿದ್ದು, ಜನಸಾಮಾನ್ಯರು ಮೊಟ್ಟೆ ತಿನ್ನೋಕೆ ಆಗದ ಸ್ಥಿತಿ ಎದುರಾಗಿದೆ.
ಇತ್ತೀಚಿಗೆ ಮೊಟ್ಟೆ ತಿನ್ನುವವರ ಸಂಖ್ಯೆ ಹೆಚ್ಚಾಗ್ತಿದ್ದು, ಅದ್ರ ಬೇಡಿಕೆ ಕೂಡಾ ಜಾಸ್ತಿಯಾಗ್ತಿದೆ. ಆದರೆ ಕೋಳಿಗಳಿಗೆ ಹಾಕುವ ದವಸ ಧಾನ್ಯ ಹಾಗೂ ಆಹಾರಗಳ ಬೆಲೆ ಏರಿಕೆಯಾಗುತ್ತಿರುವ ಕಾರಣ ಮೊಟ್ಟೆ ಬೆಲೆ ದಿಢೀರನೇ ಏರಿಕೆಯಾಗಿದೆ. ಕಳೆದ ತಿಂಗಳು ನಾಲ್ಕೈದು ರೂಪಾಯಿಗೆ ಸಿಗ್ತಾ ಇದ್ದ ಮೊಟ್ಟೆ ಇದೀಗಾ ರಿಟೇಲ್ ಅಂಗಡಿಗಳಲ್ಲಿ ಏಳು ರೂಪಾಯಿಗೆ ಏಕಾಏಕಿ ಏರಿಕೆಯಾಗಿದ್ದು ಹೋಲ್‌ಸೇಲ್‌ನಲ್ಲಿ 6.50ರೂಪಾಯಿಗೆ ದೊರೆಯುತಿದೆ. ಹೀಗಾಗಿ ಜನರು ಸಹ ಮೊಟ್ಟೆ ತಿನ್ನೋದಾ ಬೇಡ್ವಾ ಎಂದು ಯೋಚನೆ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಒಟ್ನಲ್ಲಿ ದಿನ ಬಳಕೆ ವಸ್ತುಗಳು ದಿನೇ ದಿನೇ ಹೆಚ್ಚಾಗ್ತಿದ್ದು, ಇದೀಗ ಮೊಟ್ಟೆಯ ಸರದಿಯಾಗಿದೆ.. ಸದ್ಯದ ಮಟ್ಟಿಗೆ ಈ ಮೊಟ್ಟೆ ಬೆಲೆ ಕಡಿಮೆಯಾಗದೆ ಇರೋದ್ರಿಂದ ಮೊಟ್ಟೆಪ್ರಿಯರು ಈ ಶಾಕ್ಗೆ ಹೇಗೆ ಹೊಂದಿಕೊಳ್ತಾರೆ ಅನ್ನೋದನ್ನ ಕಾದು ನೋಡ್ಬೇಕು.
ವರದಿ : ವರ್ಷಿತಾ ತಾಕೇರಿ