ಗುವಾಹಟಿ : ಸೋನಿತ್‌ಪುರದಲ್ಲಿ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ವಿಶ್ವದ ಅತ್ಯಂತ ಹಿರಿಯ ಆನೆ ಬಿಜುಲಿ ಪ್ರಸಾದ್ (86) ಸೋಮವಾರ ಮೃತಪಟ್ಟಿದ್ದಾರೆ.
ಈ ಆನೆಗೆ 89 ವರ್ಷ ವಯಸ್ಸಾಗಿತ್ತು. ಅಸ್ಸಾಂನ ಟೀ ತೋಟಗಳಲ್ಲಿ ಈ ಆನೆಯು ರಾಜನಂತೆ ಬದುಕಿತ್ತು. ಏಷ್ಯಾಟಿಕ್ ಪ್ರಬೇಧದ ಆನೆ ಇದಾಗಿತ್ತು, ಸುದೀರ್ಘ ಜೀವಿತಾವಧಿಯಿಂದಾಗಿ ವಿಶ್ವಾದ್ಯಂತ ಗಮನ ಸೆಳೆದಿತ್ತು. ಅಸ್ಸಾಂನ ಬೆಹಾಲಿ ಟೀ ಎಸ್ಟೇಟ್‌ನಲ್ಲಿ ಈ ಆನೆ ಕೊನೆಯುಸಿರೆಳೆದಿದೆ. ದಿ ವಿಲಿಯಮ್ಸನ್ ಮಗೋರ್ ಗ್ರೂಪ್‌ಗೆ ಸೇರಿರುವ ಟೀ ತೋಟದಲ್ಲಿ ಸೋಮವಾರ ಬೆಳಗಿನ ಜಾವ 3.30ಕ್ಕೆ ಈ ಆನೆ ಕೊನೆಯುಸಿರೆಳೆದಿದೆ.
ಬಿಜುಲಿ ಪ್ರಸಾದ್ ಎಂಬ ಆನೆ ಅಸ್ಸಾಂನ ಟೀ ಎಸ್ಟೇಟ್‌ನಲ್ಲಿ ರಾಜರೋಷವಾಗಿ ಮೆರೆಯುತ್ತಿದ್ದು, ಆನಾರೋಗ್ಯದಿಂದ ಬಳಲುತ್ತಿತ್ತು, ಅಲ್ಲದೇ ಕಳೆದ 10 ವರ್ಷಗಳ ಹಿಂದೆಯೇ ಆನೆ ಹಲ್ಲುಗಳನ್ನು ಕಳೆದುಕೊಂಡಿತ್ತು.
ಇದರಿಂದಾಗಿ ಆನೆಗೆ ಸರಿಯಾಗಿ ಆಹಾರವನ್ನು ಸೇವನೆ ಮಾಡೋದಕ್ಕೆ ಆಗುತ್ತಿರಲಿಲ್ಲ . ಅಲ್ಲದೇ ವಯೋಸಹಜ ಕಾಯಿಲೆಯಿಂದ. ಸಲಗದ ಸಾವಿನಪ್ಪಿದ್ದು, ಸಾವಿನ ವಿಚಾರ ತಿಳಿದು ಎಲ್ಲರೂ ಬೇಸರದಲ್ಲಿದ್ದಾರೆ. ಇಂಗ್ಲೆಂಡ್‌ನ ಒಲಿವರ್ ಸಾಹಿಬ್ ಎಂಬುವರು ಈ ಆನೆಯ ಮೊದಲ ಮಾವುತರಾಗಿದ್ದರು. ಅವರೇ ಈ ಆನೆಗೆ ಬಿಜುಲಿ ಪ್ರಸಾದ್ ಎಂದು ಹೆಸರಿಟ್ಟಿದ್ದರು