Breaking News CM ಸಿದ್ದರಾಮಯ್ಯ ಪರ ಅಶೋಕ್ ಬ್ಯಾಟಿಂಗ್.!State News

ಬೈಕ್ ಸವಾರರು ಕಡ್ಡಾಯ ಹೆಲ್ಮೆಟ್ ಬಳಸಿ, ಕಾರು ಚಾಲಕರು ಸೀಟ್ ಬೆಲ್‌ ಧರಿಸಿ : ಶಾಸಕ ಎಚ್.ವಾಯ್.ಮೇಟಿ

ಬಾಗಲಕೋಟೆ : ಬಹು ಅಮೂಲ್ಯವಾದ ಜೀವ ರಕ್ಷಣೆ ಅವಶ್ಯವಾಗಿದ್ದು, ಪ್ರತಿಯೊಬ್ಬ ಬೈಕ್ ಸವಾರ ಹೆಲ್ಮೆಟ್ ಬಳಸಿ, ಕಾರು ಚಾಲಕರು ಸೀಟ್ ಬೆಲ್ಟ್‌ ಕಡ್ಡಾಯವಾಗಿ ಬಳಸಬೇಕೆಂದು ಶಾಸಕ ಎಚ್.ವೈ.ಮೇಟಿ ಆಗ್ರಹಿಸಿದ್ದಾರೆ.

ವಿದ್ಯಾಗಿರಿಯ ಕಾಲೇಜ ವೃತ್ತದಲ್ಲಿ ಆಯೋಜಿಸಲಾಗಿದ್ದ 10 ಪೊಲೀಸ್ ದ್ವಿಚಕ್ರ ವಾಹನ ಲೋಕಾರ್ಪಣೆ ಹಾಗೂ ಹೆಲ್ಮೆಟ್ ಕಡ್ಡಾಯವ ಅಭಿಯಾನ ಪ್ರಯುಕ್ತ ಉಚಿತ ಹೆಲ್ಮೆಟ್ ವಿತರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು ಇತ್ತೀಚೆಗೆ ನಡೆದಂತಹ ಮೋಟಾರ ಸೈಕಲ್ ಅಪಘಾತದಲ್ಲಿ ಹೆಚ್ಚಿನ ಜನ ತೆಲೆಗೆ ಪೆಟ್ಟು ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿವೆ. ಹೆಲ್ಮೆಟ್ ಬಳಸಿದ್ದರೆ ಈ ಅನಾಹುತ ಸಮಭವಿಸುತ್ತಿರಲಿಲ್ಲವೆಂದರು.

ಹಿಂದೆ ಹೆಲ್ಮೆಟ್ ಕಡ್ಡಾಯವೇ ಇಲ್ಲದ ಸಮಯದಲ್ಲಿ ನಾನು ಕೂಡಾ ಹೆಲ್ಮೆಟ್ ಬಳಸಿದ್ದರಿಂದ ತಲೆಒಂದು ಬಿಟ್ಟು ಉಳಿದೆಲ್ಲ ಗಾಯಗಳಾಗಿದ್ದು, ಮರೆತಿಲ್ಲ. ಅಲ್ಲದೇ ಕಾರಿನಲ್ಲಿ ಹೋಗುವಾಗ ಸೀಟ್ ಬೆಲ್ಟ ಧರಿಸದೇ ಇದ್ದಾಗ ಅಪಘಾತದಲ್ಲಿ ಸಿಲುಕಿ 25 ದಿನಗಳ ವರೆಗೆ ಆಸ್ಪತ್ರೆಯಲ್ಲಿ ಇದ್ದ ಬಗ್ಗೆ ನೆನಪಿಸಿಕೊಂಡರು. ಪ್ರತಿಯೊಬ್ಬ ಸವಾರನ ಹಿಂದೆ ಕುಟುಂಬ ಅವಲಂಭಿತವಾಗಿದ್ದು, ಅವಲಂಬಿತ ಕುಟುಂಬದವರ ರಕ್ಷಣೆ ನಿಮ್ಮದಾಗಿದ್ದು, ಜವಾಬ್ದಾರಿಯುತವಾಗಿ ಹಾಗೂ ಸುರಕ್ಷಿತವಾಗಿ ವಾಹನ ಚಲಾಯಿಸಿ ಪ್ರಾಣ ಹಾನಿಯಾಗದಂತೆ ಎಚ್ಚರ ವಹಿಸಬೇಕು ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ದೇಶದಲ್ಲಿ ಪ್ರತಿ ವರ್ಷ 1.60 ಲಕ್ಷಕ್ಕೂ ಹೆಚ್ಚು ಅಪಘಾತದಲ್ಲಿ ಮರಣ ಹೊಂದಿತ್ತಾರೆ. ಬಾಗಲಕೋಟೆ ಜಿಲ್ಲೆಯಲ್ಲಿ ವರ್ಷಕ್ಕೆ 1200-1500 ವರೆಗೆ ಅಪಘಾತಗಳು ಸಂಭವಿಸುತ್ತಿದ್ದು, ಅದರಲ್ಲಿ ಕನಿಷ್ಟ 400 ಜನ ಸಾವನ್ನೊಪ್ಪುತ್ತಿದ್ದಾರೆ. ಮರಣ ಹೊಂದಿದ 400 ಜನರಲ್ಲಿ 300 ಜನ ಹೆಲ್ಮೆಟ್ ಬಳಸದೆ ಸಾವನ್ನೊಪ್ಪಿದ್ದಾರೆ ಎಂದರು.

ಈ ಎಲ್ಲ ಪ್ರಕರಣಗಳನ್ನು ಗಮನಿಸಿದಾಗ ನಾವು ನಿವೇಲ್ಲ ಈಗ ಸುರಕ್ಷಿತರಾಗಿದ್ದೇವೆ. ಆದರೆ ಹೆಲ್ಮೆಟ್ ಬಳಸದೆ ಅಪಘಾತಕ್ಕೊಳಗಾಗಿ ಮರಣ ಹೊಂದಿದ ಅಂಗವೈಕಲ್ಯ ಹೊಂದಿದವರನ್ನು ಸಂಪರ್ಕಿಸಿದಾಗ ಅವರಿಂದ ಬರುವ ಮಾತು ಅಂದು ನಾವು ಹೆಲ್ಮೆಟ್ ಬಳಸದೇ ಇದ್ದುದರಿಂದ ಈ ಅಪಘಾತ ಸಂಭವಿಸಿದೆ ಎಂದು ಹೇಳುತ್ತಾರೆ. ಸಮಯ ಮುಗಿದು ಹೋಗಿರುತ್ತದೆ. ಇದನ್ನೆಲ್ಲ ನೆನಪಿನಲ್ಲಿಟ್ಟುಕೊಂಡು ಪ್ರತಿಯೊಬ್ಬರು ಬೈಕ್ ಸವಾರ ಹೆಲ್ಮೆಟ್, ಕಾರ್ ಸವಾರ ಬೆಲ್ಟ ಧರಿಸಿ ಚಲಾಯಿಸಲು ತಿಳಿಸಿದರು.

ಈ ಸಂದರ್ಭದಲ್ಲಿ ಮಾಧ್ಯಮದವರಿಗೆ ಹಾಗೂ ಸಾರ್ವಜನಿಕರಿಗೆ ಸಾಂಕೇತಿಕವಾಗಿ ಹೆಲ್ಮೆಟ್ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಅಪರ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮಹಾಂತೇಶ್ವರ ಜಿಡ್ಡಿ, ಡಿಎಸ್‍ಪಿಗಳಾದ ಪಂಪನಗೌಡ, ಪ್ರಭು ಪಾಟೀಲ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಮಾದಕ ವ್ಯಸನ ಮುಕ್ತ ಜಾಗೃತಿ ನಡಿಗೆ
ಜಿಲ್ಲಾ ಪೊಲೀಸ್ ವತಿಯಿಂದ ಮಾದಕ ವ್ಯಸನ ಮುಕ್ತ ಬಾಗಲಕೋಟೆ ನಿಮಿತ್ಯ ನಡಿಗೆ ಮತ್ತು ಓಟ ಕಾರ್ಯಕ್ರಮ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಅವರ ನೇತೃತ್ವದಲ್ಲಿ ಜರುಗಿತು. ನಡಿಗೆ ಮತ್ತು ಓಟ ವಿದ್ಯಾಗಿರಿ ಇಂಜಿನೀಯರಿಂಗ್ ಕಾಲೇಜ ಸರ್ಕಲ್‍ದಿಂದ ಪ್ರಾರಂಭವಾಗಿ ಎಲ್.ಐ.ಸಿ ಸರ್ಕಲ್‍ಗೆ ಮುಕ್ತಾಯಗೊಂಡಿತು. ನಡಿಗೆಯಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!