ಬಿಜೆಪಿ (BJP) ಯಲ್ಲಿ ಗುರುತಿಸಿಕೊಂಡಿರುವ ತಮಿಳುನಾಡಿ (Tamil nadu) ನ ವಕೀಲೆ ಲಕ್ಷ್ಮಣ ಚಂದ್ರ ವಿಕ್ಟೋರಿಯಾ ಗೌರಿ (Lakshmana chandra victoria gowri) ಅವರನ್ನು ಮುದ್ರಾಸ್ ಹೈಕೋರ್ಟ್ಗೆ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳನ್ನು ಸುಪ್ರೀಂಕೋರ್ಟ್ (Supremecourt) ವಜಾಗೊಳಿಸಿದೆ. ಈ ನಡುವೆ ಗೌರಿ ಪ್ರತಿಜ್ಞಾವಿಧಿ ಸ್ವೀಕರಿಸಿದ್ದಾರೆ. ಸುಪ್ರೀಂಕೋರ್ಟ್ ನಲ್ಲಿ ಅರ್ಜಿಗಳ ವಿಚಾರಣೆ ಜರಗುವಾಗಲೇ ಪ್ರಮಾಣವಚನ ಸ್ವೀಕಾರ ಸಮಾರಂಭ ಕೂಡ ನಡೆದಿತ್ತು.
SC declines plea against appointment of Victoria Gowri as Madras HC judge
Read @ANI Story | https://t.co/DCOFPE05rP#SupremeCourtOfIndia #VictoriaGowri #MadrasHighCourt pic.twitter.com/DDUdrGlYHi
— ANI Digital (@ani_digital) February 7, 2023
ವಿಕ್ಟೋರಿಯಾ ಗೌರಿ ಅವರ ನೇಮಕಾತಿಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿರುವುದರಿಂದ ಈ ವಿಚಾರದಲ್ಲಿ ತುರ್ತು ಮಧ್ಯಪ್ರವೇಶ ಮಾಡಬೇಕು ಎಂದು ಹಿರಿಯ ವಕೀಲ ರಾಜು ರಾಮಚಂದ್ರನ್ ಅವರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಈ ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯನ್ನು ಕತ್ತಲಲ್ಲಿ ಇರಿಸಲಾಗಿತ್ತು. ಸಂಬಂಧಿತ ಮಾಹಿತಿಯನ್ನು ಕೊಲಿಜಿಯಂಗೆ ನೀಡಿರಲಿಲ್ಲ ಎಂದು ವಾದಿಸಿದ್ರು. ದಾಖಲೆಯಲ್ಲಿ ಇರುವ ಪ್ರತಿ ಅಂಶವನ್ನೂ ತಾವು ಓದಿರುವುದಾಗಿ ನ್ಯಾಯಮೂರ್ತಿಗಳು ಹೇಳಿದರು. ಇದನ್ನೂ ಓದಿ : – ಟರ್ಕಿ-ಸಿರಿಯಾ ಭೂಕಂಪ- ಸಾವಿನ ಸಂಖ್ಯೆ 4 ಸಾವಿರಕ್ಕೆ ಏರಿಕೆ- ಇನ್ನೂ 8 ಪಟ್ಟು ಹೆಚ್ಚುವ ಸಾಧ್ಯತೆ
ನಾವು ಈ ರಿಟ್ ಅರ್ಜಿಗಳನ್ನು ಪುರಸ್ಕರಿಸುವುದಿಲ್ಲ. ಇದಕ್ಕೆ ಕಾರಣಗಳನ್ನು ನೀಡಲಾಗುವುದು” ಎಂದು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಭೂಷಣ್ ರಾಮಕೃಷ್ಣ ಗವಾಯ್ (Bhushan ramakrishna gavai) ಅವರನ್ನು ಒಳಗೊಂಡ ವಿಶೇಷ ನ್ಯಾಯಪೀಠ ಹೇಳಿದೆ.
ಇದನ್ನೂ ಓದಿ : – ಭದ್ರಾವತಿ ವಿಐಎಸ್‌ಎಲ್ ಕಾರ್ಖಾನೆ ಮುಚ್ಚದಿರಿ- ಪ್ರಧಾನಿ ಮೋದಿಗೆ ಸಿದ್ದರಾಮಯ್ಯ ಪತ್ರ