ಬೆಂಗಳೂರು : ಬಿಜೆಪಿ ನಾಯಕರು ಪ್ರತಿಭಟನೆ ಮಾಡುವುದು ಶೋಭೆ ತರುವುದಿಲ್ಲ.ಕಾನೂನಿಗೆ ಇವರು ಬೆಲೆ ಕೊಡಲ್ಲ ಅಂತಾಯ್ತು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಗುಡಿಗಿದ್ದಾರೆ.
ವಿಧಾನಸೌಧದಲ್ಲಿ ಬಿಜೆಪಿ ಪ್ರತಿಭಟನೆ ವಿಚಾರವಾಗಿ ಮಾತನಾಡಿದ ಅವರು ಅವರು ಕರಸ ಸೇವಕರೆ ಅದರಲ್ಲಿ ಡೌಟ್ ಇಲ್ಲ. ಹುಬ್ಬಳ್ಳಿಯಲ್ಲಿ ಕೇಸ್ ಆಗಿದೆ, ಕೋರ್ಟ್ ನಲ್ಲಿ ಇದೆ. ಕೋರ್ಟ್ ಹಳೆ ಕೇಸ್ ವೀಲೆವಾರಿ ಮಾಡಲು ಹೇಳಿದೆ. ಶ್ರೀಕಾಂತ್ ಪೂಜಾರಿ ಮೇಲೆ ೧೬ ಕೇಸ್ ಇದ್ದಾವೆ. ಅವನ ಮೇಲೆ ಕೇಸ್ ಇದ್ದಾಗ ಕ್ರಿಮಿನಲ್ ಅನ್ನೊದರಲ್ಲಿ ಅನುಮಾನ ಇಲ್ಲ. ಅವನ ಬಂಧನಮಾಡಬಾರದು ಅನ್ನುವುದು ಸರಿಯಲ್ಲ.
ಬಿಜೆಪಿ ನಾಯಕರು ಪ್ರತಿಭಟನೆ ಮಾಡುವುದು ಶೋಭೆ ತರುವುದಿಲ್ಲ. ಕಾನೂನಿಗೆ ಇವರು ಬೆಲೆ ಕೊಡಲ್ಲ ಅಂತಾಯ್ತು. ನಮ್ಮ ಮೇಲೂ ಕೇಸ್ ಇದ್ದಾವೆ. ಕಾನೂನಿಗಿಂತ ಬಿಜೆಪಿಗರು ದೊಡ್ಡವರು ಅಂತ ತಿಳಿದುಕೊಂಡಿದ್ದಾರೆ. ವಿರೋಧ ಪಕ್ಷಾವಾಗಿ ಬಿಜೆಪಿ ಇರುವುದಕ್ಕೆ ಲಾಯಕ್ಕಿಲ್ಲ ಎಂದು ಹೇಳಿದರು.
ವರದಿ : ಬಸವರಾಜ ಹೂಗಾರ