ಬೆಂಗಳೂರು : ಬಿಜೆಪಿಯ 10 ಜನ ಸದಸ್ಯರನ್ನು ಅಧಿವೇಶನ ಮುಗಿಯುವವರೆಗೂ ಭಾಗಿಯಾಗದಂತೆ ಸ್ಪೀಕರ್ ಯು.ಟಿ ಖಾದರ್ ಆದೇಶ ಹೊರಡಿಸಿದ್ದಾರೆ.
ಇಂದು ವಿಧೇಯಕದ ಪ್ರತಿಗಳನ್ನು ಹರಿದು ಡೆಪ್ಯೂಟಿ ಸ್ಪೀಕರ್ ಮೇಲೆ ಎಸೆದ ಹಿನ್ನೆಲೆಯಲ್ಲಿ ಸಮಗ್ರವಾಗಿ ಮಾಹಿತಿಯನ್ನು ಪಡೆದುಕೊಂಡ ಸ್ಪೀಕರ್ ಅವರು ಈ ಆದೇಶವನ್ನ ಹೊರಡಿಸಿದರು.
ಅರಗ ಜ್ಞಾನೇಂದ್ರ, ಸುನೀಲ್ ಕುಮಾರ್, ಅರವಿಂದ್ ಬೆಲ್ಲದ್, ವೇದವ್ಯಾಸ್ ಕಾಮತ್, ಆರ್ .ಆಶೋಕ್ , ಅಶ್ವಥ್ ನಾರಾಯಣ್, ಧೀರಜ್ ಮುನಿರಾಜು, ಭರತ್ ಶೆಟ್ಟಿ, ಯಶಪಾಲ್ ಸುವರ್ಣ, ಉಮಾನಾಥ್ ಕೋಟ್ಯಾನ್ ಇವರುಗಳು ಸ್ಪೀಕರ್ ಆದೇಶಕ್ಕೆ ಗುರಿಯಾದವರು. ಇನ್ನೆರಡು ದಿನಗಳು ಅಧಿವೇಶನ ನಡೆಯಬೇಕಿದೆ.