ಬಾಗಲಕೋಟೆ: ಹುಬ್ಬಳ್ಳಿಯ ಹಿಂದು ಕಾರ್ಯಕರ್ತರ ಬಂಧನ ಖಂಡಿಸಿ ಬಾಗಲಕೋಟೆ ಭಾರತೀಯ ಜನತಾ ಪಕ್ಷದಿಂದ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಯಿತು.
32 ವರ್ಷಗಳ ಹಿಂದೆ ಶ್ರೀರಾಮಂದಿರಕ್ಕೆ ಹೋರಾಟಕ್ಕೆ ಹೋಗಿದ್ದ ಹಿಂದೂ ಕಾರ್ಯಕರ್ತರನ್ನು ಬಂಧಿಸಿದ ಕಾಂಗ್ರೆಸ್ ಸರಕಾರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ಪ್ರತಿಭಟನೆಯಲ್ಲಿ . ಮಾಜಿ ವಿಪ ಸದಸ್ಯ ನಾರಾರಾಯಣಸಾ ಬಾಂಢಗೆ ಮಾತನಾಡಿ, ರಾಮಮಂದಿರ ಚುನಾವಣೆಯ ಪ್ರಶ್ನೆಯಲ್ಲ. ಅಧಿಕಾರದ ಪ್ರಶ್ನೆಯಲ್ಲ. ಈ ದೇಶದ ರಾಷ್ಟ್ರೀಯತೆ, ಮಾನ ಸನ್ಮಾನ, ಅಸ್ಮೀತೆಯ ಪ್ರಶ್ನೆಯ ಪ್ರತೀಕವಾಗಿದೆ. ಆದರೆ ಈ ವಿಷಯದಲ್ಲಿ ಕಾಂಗ್ರೆಸ್ ಸರಕಾರ ಯಾವ ರೀತಿ ನಡೆದುಕೊಳ್ಳುತ್ತಿದೆಂದು ಜನರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ 32 ವರ್ಷಗಳ ಹಿಂದೆ ಶ್ರೀರಾಮಂದಿರಕ್ಕಾಗಿ ಹೋದ ಹೋರಾಟಗಾರರನ್ನು ಬಂಧಿಸುವ ಕೆಲಸ ಮಾಡುತ್ತಿದ್ದಾರೆ. ಇದು ದುರ್ದೈವದ ಸಂಗತಿ.
ಕಾಂಗ್ರೆಸ್ ಸರಕಾರದಿಂದ ಮೋಘಲ್ ಸಾಮ್ರಾಜ್ಯವನ್ನು ತರುವ ಕಾರ್ಯವನ್ನು ಪ್ರಯತ್ನಿಸುತ್ತಿದ್ದಾರೆ. ಸಂಗೊಳ್ಳಿ ರಾಯಣ್ಣನ ನಾಡನ್ನು ಟಿಪ್ಪುವಿನ ನಾಡನ್ನಾಗಿ ಮಾಡಲು ಹೊರಟಿದ್ದಾರೆ. ಮುಸ್ಲಿಂರ ಓಲೈಕೆಗಾಗಿ ಇಂತಹ ಹೀನ ಕಾರ್ಯಮಾಡುತ್ತಿದ್ದಾರಾ? ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಯೋಧ್ಯೆಯಲ್ಲಿ ಶ್ರೀರಾಮ ಮೂರ್ತಿ ಸ್ಥಾಪನೆಯ ದಿನದಂದು ದೀಪೋತ್ಸವ ಮಾಡಬೇಕು. 22 ರಂದು ಮನೆಮನೆಗಳಲ್ಲಿ ಐದು ದೀಪಗಳನ್ನು ಬೆಳಗಿಸಿ ಪ್ರತಿಭಟಿಸಿಬೇಕು ಎಂದು ತಿಳಿಸಿದರು. ಮಾಜಿ ಶಾಸಕ ವೀರಣ್ಣ ಚರಂತಿಮಠ , ಬಿಜೆಪಿ ಮುಖಂಡರು ಕಾರ್ಯಕರ್ತರು ಇದ್ದರು.
ಗದ್ದನಕೇರಿ ಕ್ರಾಸ್ ಟ್ರಾಫಿಕ್ ಸಮಸ್ಯೆಗೆ ಪರಿಹಾರಕ್ಕೆ ಕ್ರಮ: ಪ್ರಸನ್ ದೇಸಾಯಿ
ಬಾಗಲಕೋಟೆ ತಾಲೂಕಿನ ಗದ್ದನಕೇರಿ ಕ್ರಾಸ್ನಲ್ಲಿ ಟ್ರಾಫಿಕ್ ಸಮಸ್ಯೆ ತಲೆದೂರುತ್ತಿದೆ. ದಿನೇ ದಿನೇ ವಾಹನ ದಟ್ಟನೆಯಿಂದ ಸಮಸ್ಯೆ ಉದ್ಬವಿಸುತ್ತಿದೆ. ರಾಷ್ಟ್ರೀಯ ಹೆದ್ದಾರಿ ಇರುವುದರಿಂದ ನಾಲ್ಕು ಕಡೆಗಳಿಂದ ಬಸ್, ಲಾರಿ, ಮತ್ತಿತರ ವಾಹನ ಸಂಚಾರ ದಟ್ಟನೆ ಇದೆ. ಅದಕ್ಕೆ ಪೂರಕ ಪರಿಹಾರಕ್ಕೆ ಕ್ರಮ ಕಂಡುಕೊಳ್ಳಲಾಗುತ್ತಿದೆAದು ಹೆಚ್ಚುವರಿ ಎಸ್ಪಿ ಪ್ರಸನ್ ದೇಸಾಯಿ ಹೇಳಿದರು. ಗದ್ದಿನಕೇರಿಯಲ್ಲಿ ಟ್ರಾಫಿಕ್ ಸಮಸ್ಯೆ ಉದ್ಬವಿಸುವ ಸ್ಥಳಕ್ಕೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾಡಿದರು. ಈಗಾಗಲೇ ಟ್ರಾಫಿಕ್ ಸಮಸ್ಯೆಯಿಂದ ವಾಹನ ಸವಾರರು ಪರಿತಪಿಸುತ್ತಿದ್ದಾರೆ. ಈ ಸಮಸ್ಯೆಗೆ ಪರಿಹಾರಕ್ಕೆ ಸಾರಿಗೆ ಅಧಿಕಾರಿಗಳು, ಹೆದ್ದಾರಿ ಇಂಜಿನೀಯರ್ಗಳು, ಬಂದಿದ್ದಾರೆ. ಟ್ರಾಫಿಕ್ ಸಮಸ್ಯೆ ಆಗದಂತೆ ಎಲ್ಲ ಮಾರ್ಕಗಳನ್ನು ಹಾಕಲು ಸೂಚಿಸಲಾಗುತ್ತಿದೆ. ಇದಕ್ಕೆ ಗದ್ದನಕೇರಿ ಗ್ರಾಪಂನವರು ಸಾಥ್ ನೀಡಿದ್ದಾರೆ.ಹಾಗೆ ಸಾರ್ವಜನಿಕರು ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಸಹಕಾರ ನೀಡಬೇಕು ಎಂದು ತಿಳಿಸಿದರು