ಬೆಂಗಳೂರು : ಪಂಚರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ಅವರು. ಬಹು ನಿರೀಕ್ಷಿತ ಪಂಚ ರಾಜ್ಯ ಚುನಾವಣೆ ತನ್ನದೇ ಮಹತ್ವ ಪಡೆದಿತ್ತು..ಇದು ಸೆಮಿಫೈನಲ್ ಅಂತಾ ಮುಖ್ಯಮಂತ್ರಿ ಒತ್ತಿ ಒತ್ತಿ ಹೇಳಿದ್ರು. ಐದು ರಾಜ್ಯಗಳ ಪೈಕಿ ಮೂರು ರಾಜ್ಯಗಳಲ್ಲಿ ಸ್ಪಷ್ಟವಾಗಿ ಬಹುಮತ ಬರ್ತಿದೆ. ಎಲ್ಲ ರಾಜ್ಯಗಳಲ್ಲೂ ಭಾರತೀಯ ಜನತಾ ಪಕ್ಷ ವರ್ಕೌಟ್ ಆಗಿದೆ ಅದರಲ್ಲೂ ಮಧ್ಯಪ್ರದೇಶ, ರಾಜಸ್ಥಾನ, ಬಿಜೆಪಿ ಬಹುಮತ ಪಡೀತಿದೆ.
ತೆಲಂಗಾಣದಲ್ಲಿ ಕಳೆದಬಾರಿ 1ಇತ್ತು ಈಗ 8ಕ್ಕೆ ಬಂದಿರೋದು ಖುಷಿಯಿದೆ. ಕಾಂಗ್ರೆಸ್ ಮೋದಿಯವ್ರನ್ನ ಟಾರ್ಗೆಟ್ ಮಾಡಿ ಚುನಾವಣೆ ನಡೆಸಿದ್ರು.. ಜಾತಿ ರಾಜಕಾರಣ ಮಾಡಿದ್ರು, ಸನಾತನ ಧರ್ಮದ ಬಗ್ಗೆಯೂ ರಾಜಕಾರಣ ಮಾಡಿದ್ರು.. ಈ ಮೂರನ್ನೂ ಜನ ತಿರಸ್ಕಾರ ಮಾಡಿ ಮೋದಿಯವರಿಗೆ ಪುರಸ್ಕಾರ ಮಾಡಿದ್ದಾರೆ. ಆಪ್ ನಿಂದ ಶುರುವಾಗಿದ್ದ ಗ್ಯಾರಂಟಿಯನ್ನ ಕಾಂಗ್ರೆಸ್ ಹಿಮಾಚಲ್ ಪ್ರದೇಶ್ ಗೆದ್ದಿದ್ರು. ತೆಲಂಗಾಣದಲ್ಲಿ ಇಲ್ಲಿಗಿಂತ ಹೆಚ್ಚು ಗ್ಯಾರೆಂಟಿ ಕೊಟ್ಟು ಜನರಿಗೆ ಮೋಸ ಮಾಡೋ ಪ್ರಯತ್ನ ಮಾಡಿದ್ರು. ಆದ್ರೆ ಇವ್ರ ಆಟ ಮಧ್ಯಪ್ರದೇಶ, ಚತ್ತೀಸ್ ಘರ್, ರಾಜಸ್ಥಾನದಲ್ಲಿ ನಡೀಲಿಲ್ಲ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಫೈಟ್ ಇರುತ್ತದೆ. ಅತಿ ಹೆಚ್ಚು ಸೀಟ್‌ಗಳನ್ನು ಭಾರತೀಯ ಜನತಾಪಕ್ಷ ಗೆಲ್ಲುತ್ತದೆ. ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಯಲ್ಲಿ ಮತ್ತೆ 25 ಸೀಟು ಗೆಲ್ತೇವೆ ಎಂದಿದ್ದಾರೆ