ಬೆಂಗಳೂರು : ಕಾಂಗ್ರೆಸ್ ಸರ್ಕಾರವನ್ನು ಬೀಳಿಸಲು ಬಹಳ ದೊಡ್ಡ ಮಟ್ಟದಲ್ಲಿ ಷಡ್ಯಂತ್ರ ನಡೀತಾ ಇದೆ. ಇದರಿಂದ ಯಾವುದೇ ಫಲ ಕೂಡ ಅವರಿಗೆ ಸಿಗಲ್ಲ. ಪ್ರತಿಯೊಬ್ಬರ ನಡೆ ಕೂಡ ನಮಗೆ ಗೊತ್ತಿದೆ ಎಂದು ಡಿಸಿಎಂ ಡಿಕೆಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ.
ಸದಾಶಿವನಗರ ನಿವಾಸದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು , ಸರ್ಕಾರ ಬೀಳಿಸಲು ಬಿಜೆಪಿ ರೂಪಿಸುತ್ತಿರುವ ಷಡ್ಯಂತ್ರ ಫಲಿಸುವುದಿಲ್ಲ ಈ ಷಡ್ಯಂತ್ರದ ಬಗ್ಗೆ ನಮಗೆ ಗೊತ್ತಿದೆ ಪ್ರತಿಯೊಬ್ಬ ನಾಯಕರ ನಡೆಯ ಬಗ್ಗೆಯೂ ನಮಗೆ ಗೊತ್ತಿದೆ. ದೊಡ್ಡವರು ಇದರಲ್ಲಿ ಪ್ರಯತ್ನ ಮಾಡ್ತಾ ಇದ್ದಾರೆ.
ಪಕ್ಷದ ಶಾಸಕರು ಯಾರೇ ಆಗಲಿ ಪಕ್ಷದ ಆಂತರಿಕ ವಿಚಾರ, ಸರ್ಕಾರ ಹಾಗೂ ಅಧಿಕಾರದ ಬಗ್ಗೆ ಮಾಧ್ಯಮಗಳ ಮುಂದೆ ಅನಗತ್ಯ ಹೇಳಿಕೆ ನೀಡಬಾರದು ಇಲ್ಲದೆ ಹೋದ್ರೆ ನೋಟೀಸ್ ನೀಡಬೇಕಾಗುತ್ತೆ ಎಂದು ಮನವಿ ಮಾಡಿದ್ದಾರೆ.