Breaking News CM ಸಿದ್ದರಾಮಯ್ಯ ಪರ ಅಶೋಕ್ ಬ್ಯಾಟಿಂಗ್.!Political NewsState News

ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಗೆ ಉತ್ತಮ ಪ್ರತಿಕ್ರಿಯೆ ಬರುತ್ತಿದೆ – ಅರುಣ್ ಸಿಂಗ್

ಬಿಜೆಪಿಯಿಂದ ವಿಜಯ ಸಂಕಲ್ಪ ಯಾತ್ರೆ ಅತ್ಯುತ್ತಮವಾಗಿ ನಡೆಯುತ್ತಿದೆ. ಪ್ರತಿ ಬೂತ್ ನಲ್ಲಿ ಬಿಜೆಪಿ ಬಾವುಟ ಕಟ್ಟುವ ಕೆಲಸ ಆಗುತ್ತಿದೆ ಎಂದು ಬಿಜೆಪಿ ಕರ್ನಾಟಕ ಉಸ್ತುವಾರಿ ಅರುಣ್ ಸಿಂಗ್ ಹೇಳಿದ್ದಾರೆ.

ಬಿಜೆಪಿ (BJP) ಯಿಂದ ವಿಜಯ ಸಂಕಲ್ಪ ಯಾತ್ರೆ ಅತ್ಯುತ್ತಮವಾಗಿ ನಡೆಯುತ್ತಿದೆ. ಪ್ರತಿ ಬೂತ್ ನಲ್ಲಿ ಬಿಜೆಪಿ ಬಾವುಟ ಕಟ್ಟುವ ಕೆಲಸ ಆಗುತ್ತಿದೆ ಎಂದು ಬಿಜೆಪಿ ಕರ್ನಾಟಕ ಉಸ್ತುವಾರಿ ಅರುಣ್ ಸಿಂಗ್ (Arun singh) ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು ಕೇಂದ್ರ ರಾಜ್ಯ ಸರ್ಕಾರದ ಯೋಜನೆಗಳನ್ನ ಜನರಿಗೆ ತಲುಪಿಸುವ ಕೆಲಸ ಮಾಡಲಾಗ್ತಿದೆ.

Bharatiya Janata Party - Wikipedia

 

ವಿಜಯ ಸಂಕಲ್ಪ ಯಾತ್ರೆ (Vijayasankalpla yatre) ಗೆ ಉತ್ತಮ ಪ್ರತಿಕ್ರಿಯೆ ಬರುತ್ತಿದೆ. ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಬೇಕು ಅಂತ ಜನ ಹೇಳ್ತಿದ್ದಾರೆ. ಗದಗದಲ್ಲಿ ಅಭಿಯಾನ ಮಾಡಿದ್ದೇನೆ. 61 ಸಾವಿರ ಬೂತ್ ಗೆ ನಾವು ತಲುಪಿದ್ದೇವೆ. ಅಮಿತ್, ನಡ್ಡಾ, ಸಿಎಂ ಎಲ್ಲರು ಅಭಿಯಾನ ಮಾಡ್ತಿದ್ದೇವೆ. ಈ ವಿಜಯ ಸಂಕಲ್ಪ ಯಾತ್ರೆಯಿಂದ ನಾವು ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದು ಹೇಳಿದರು.
ಬಿಜೆಪಿಯಿಂದ ರಥಯಾತ್ರೆ ವಿಚಾರ
ವಿಜಯ ಸಂಕಲ್ಪ ಯಾತ್ರೆ ಬಳಿಕ ರಥಯಾತ್ರೆ ಮಾಡೋ ಪ್ಲ್ಯಾನ್ ಇದೆ. ಈ ಬಗ್ಗೆ ರೂಪುರೇಷ ಸಿದ್ದಪಡಸಿ ಈ ಬಗ್ಗೆ ನಿರ್ಧಾರ ಮಾಡ್ತೀವಿ. ಬಿಜೆಪಿ ಅಧಿಕಾರಕ್ಕೆ ಬರಲು ಏನು ಬೇಕು ಅದನ್ನ ನಾವು ಮಾಡ್ತೀವಿ ಎಂದು ತಿಳಿಸಿದರು.
ಬೆಳಗಾವಿಯಲ್ಲಿ ಬಣ ರಾಜಕೀಯ ವಿಚಾರ
ಬೆಳಗಾವಿ (Belagavi) ಯಲ್ಲಿ ಯಾವುದೇ ಬಣ ರಾಜಕೀಯ ಇಲ್ಲ. ಬಿಜೆಪಿಯಲ್ಲಿ ಇರೋದು ಒಂದೇ ಒಂದು ಬಣ ಬಿಜೆಪಿ ಬಣ. ಎಲ್ಲರು ಒಟ್ಟಾಗಿ ಕೆಲಸ ಮಾಡ್ತೀವಿ. ಮೋದಿ, ನಡ್ಡಾ, ಯಡಿಯೂರಪ್ಪ ಸಿಎಂ ನೇತೃತ್ವದಲ್ಲಿ ಒಟ್ಟಾಗಿ ಕೆಲಸ ಮಾಡ್ತೀವಿ ಎಂದು ಹೇಳಿದರು.

Karnataka BJP MLA Basangouda Patil Yatnal alleges he was asked to pay Rs  2,500 crore to become CM | Deccan Herald

ಪಕ್ಷದ ವಿರುದ್ದ ಯತ್ನಾಳ್ ಹೇಳಿಕೆ ವಿಚಾರ
ಅದೆಲ್ಲ ಹಳೆ ವಿಚಾರ,ಹೊಸದು ಏನಾದ್ರು ಇದ್ದರೆ ಹೇಳಿ. ಎಲ್ಲಾ ನಾಯಕರು ಒಂದೇ ಹೇಳ್ತಿರೋದು
ಬಿಜೆಪಿ ಅಧಿಕಾರಕ್ಕೆ ಬರಬೇಕು ಅಂತ. ಎಲ್ಲರು ಅ ನಿಟ್ಟಿನಲ್ಲಿ ಕೆಲಸ ಮಾಡ್ತಿದ್ದೇವೆ. ಬಿಜೆಪಿ 150 ಸ್ಥಾನ ಪಡೆಯುತ್ತೆ ಇದಕ್ಕೆ ಬೇಕಾದ ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದರು. ಇದನ್ನು ಓದಿ :-  ಮೂವರು ಮಕ್ಕಳ ಜೊತೆ ನೀರಿನ ಸಂಪಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ತಾಯಿ

20 administrative buildings to come up in new taluks: R Ashoka | Deccan  Herald

ಮಂಡ್ಯದಲ್ಲಿ ಗೋ ಬ್ಯಾಕ್ ಅಶೋಕ್ ವಿಚಾರ
ಈ ಬಗ್ಗೆ ನನಗೆ ಮಾಹಿತಿ ಇಲ್ಲ. ಅಶೋಕ್ (Ashok)  ಪಕ್ಷದ ಸಿನಿಯರ್ ಲೀಡರ್. ಅನೇಕ ವರ್ಷಗಳಿಂದ ಪಕ್ಷಕ್ಕೆ ಕೆಲಸ ಮಾಡ್ತಿದ್ದಾರೆ. ಏನಾಗಿದೆ ಅದನ್ನ ತಿಳಿದುಕೊಂಡು ಮಾತನಾಡುತ್ತೇನೆ ಎಂದು ಅರುಣ್ ಸಿಂಗ್ ಹೇಳಿದ್ದಾರೆ.

ಇದನ್ನು ಓದಿ :-  ಭಾರತದಲ್ಲಿ ಕ್ಷತ್ರಿಯ ಸಮುದಾಯ ಇಲ್ಲದಿದ್ದಿದ್ರೆ ದೇಶದಲ್ಲಿ ಒಗ್ಗಟ್ಟು ಇರುತ್ತಿರಲಿಲ್ಲ – ಸಿಎಂ ಬೊಮ್ಮಾಯಿ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!