ಬೆಂಗಳೂರು : ಹೊಸ ವರ್ಷದ ಆಚರಣೆಗೆ ಅಂತ ಸಿಲಿಕಾನ್ ಸಿಟಿಯ ವಿವಿಧ ಭಾಗಗಳ ರಸ್ತೆಗೆ ಜನರು ಎಂಟ್ರಿ ಕೊಟ್ಟಿದ್ರು, ಪ್ರಯಾಣಿಕರ ಅನುಕೂಲಕ್ಕೆ ಅಂತ BMTC ಸಂಸ್ಥೆ ಹೆಚ್ಚುವರಿ ಬಸ್ ಗಳನ್ನು ನಿಯೋಜನೆ ಮಾಡಿದ್ದು, ಒಂದೇ ದಿನ ಬಿಎಂಟಿಸಿಯಲ್ಲಿ 27 ಲಕ್ಷ ಜನ ಪ್ರಯಾಣ ಮಾಡಿದ್ದಾರೆ.
ವರ್ಷದ ಮೊದಲ ದಿನವೇ ಬಿಎಂಟಿಸಿ ಭರ್ಜರಿ ಕಲೆಕ್ಷನ್ ಮಾಡಿದೆ. ಹೊಸ ವರ್ಷವನ್ನ ವೆಲ್ಕಮ್ ಮಾಡೋಕೆ ಜನ ತುದಿಗಾಲಿನಲ್ಲಿ ನಿಂತಿದ್ರು, ಹೊಸ ವರ್ಷವನ್ನ ಸೆಲೆಬ್ರೇಟ್ ಮಾಡೋಕೆ ಅಂತ ಸಿಲಿಕಾನ್ ಸಿಟಿಯ ಎಂ ಜಿ ರೋಡ್, ಬ್ರಿಗೇಡ್ ರೋಡ್, ಕೋರಮಂಗಲ ಇಂದಿರಾ ನಗರ್ ಸೇರಿದಂತೆ ಪ್ರಮುಖ ರಸ್ತೆಗಳು ಸಜ್ಜಾಗಿದ್ವು, BMTC ಯಲ್ಲಿ ನಾಲ್ಕು ಕೋಟಿಗೂ ಅಧಿಕ ಆದಾಯ ಬಂದೋದಗಿದೆ.
ಹೊಸ ವರ್ಷದ ಮೊದಲ ದಿನ ಬಿಎಂಟಿಸಿಯಲ್ಲಿ 27,09, 659 ಮಂದಿ ಪ್ರಯಾಣಿಕರು ಸಂಚರಿಸಿದ್ದಾರೆ. ಹೊಸ ವರ್ಷಾಚರಣೆ ಹಿನ್ನೆಲೆ ನಿನ್ನೆ ಬೆಂಗಳೂರಿನ ಹಲವು ಕಡೆ ವಿವಿಧ ಕಾರ್ಯಕ್ರಮಗಳು ನಡೆದಿದ್ದವು. ಹೊಸ ವರ್ಷಾಚರಣೆ ಹಿನ್ನೆಲೆ ಹೆಚ್ಚುವರಿ ಬಸ್ ಗಳ ಸೇವೆ ನಿಯೋಜಿಸಿದ ಹಿನ್ನೆಲೆ ಬಿಎಂಟಿಸಿ ಒಂದೇ ದಿನದಲ್ಲಿ4.37 ಕೋಟಿ ರೂ.ಆದಾಯಗಳಿಸಿದೆ. ಎಂ.ಜಿ.ರೋಡ್, ಬ್ರಿಗೇಡ್ ರೋಡ್, ಇಂದಿರಾನಗರ, ಕೋರಮಂಗಲ, ಶಾಂತಿನಗರ, ಯಲಹಂಕ ಸೇರಿ ಹಲವು ಏರಿಯಾಗಳಿಗೆ ಹೆಚ್ಚುವರಿ ಬಸ್ ಸಂಚಾರದ ವ್ಯವಸ್ಥೆ ಮಾಡಲಾಗಿತ್ತು.
ಇನ್ನು ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ಹೆಚ್ಚುವರಿ ಬಸ್‌ಗಳ ಸೇವೆ ನಿಯೋಜಿಸಿದ ಪರಿಣಾಮ ಎಂ.ಜಿ. ರೋಡ್, ಬ್ರಿಗೇಡ್ ರೋಡ್, ಇಂದಿರಾನಗರ, ಕೋರಮಂಗಲ, ಶಾಂತಿನಗರ, ಯಲಹಂಕ ಸೇರಿ ಹಲವು ನಿಲ್ದಾಣದಿಂದ ಬಸ್ ಸೇವೆ ನೀಡಿತ್ತು. ಪ್ರಯಾಣಿಕರ ಅನುಕೂಲಕ್ಕೆ ಮಧ್ಯರಾತ್ರಿ 2 ಗಂಟೆವರೆಗೂ ಬಿಎಂಟಿಸಿ ಹೆಚ್ಚುವರಿ ಬಸ್ ಸೇವೆ ಇತ್ತು. ಹೀಗಾಗಿ ಬಿಎಂಟಿಸಿ ಒಂದೇ ದಿನದಲ್ಲಿ 4.37 ಕೋಟಿ ರೂ ಆದಾಯಗಳಿಸಿದೆ.
ಒಟ್ಟಿನಲ್ಲಿ ಹೊಸ ವರ್ಷದ ಸಂಭ್ರಮಾಚರಣೆಯನ್ನು ಜನ ಅದ್ದೂರಿಯಿಂದ ಆಚರಣೆ ಮಾಡಿದ್ದು, ಬಿಎಂಟಿಸಿಯ ಈ ಕೆಲಸಕ್ಕೆ ಪ್ರಯಾಣಿಕರು ಯಾವುದೇ ತೊಂದರೆ ಇಲ್ಲದಂತೆ ಪ್ರಯಾಣ ಮಾಡಿದ್ದಾರೆ.
ವರದಿ : ಹರ್ಷಿತಾ ಪಾಟೀಲ್