ಯಾದಗಿರಿ : ತಾಲೂಕಿನ ಹೆಡಗಿಮದ್ರಾ ಗ್ರಾಮದಲ್ಲಿ ಹಾದು ಹೋಗಿರುವ ಸನ್ನತಿ ಏತ ನೀರಾವರಿ ಯೋಜನೆಯ ಉಪ ಕಾಲುವೆ ಒಡೆದು ಅಪಾರ ನೀರು ರೈತರ ಜಮೀನಿಗೆ ನುಗ್ಗಿರುವ ಘಟನೆ ನಡೆಸಿದೆ.
ಹೆಡಗಿಮದ್ರಾ ಗ್ರಾಮದಲ್ಲಿ ರಾತ್ರಿ ಕೊನೆಯ ಭಾಗದ ರೈತರು ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಕಾಲುವೆ ಮೂಲಕ ಹರಿಸಿದಾಗ ರೈತ ನವಾಬ್ ಖಾನ್ ಇತರ ರೈತರ ಜಮೀನಿನಲ್ಲಿ ಹಾದು ಹೋದ ಕಾಲುವೆ ನೀರಿನ ಒತ್ತಡ ತಾಳದೇ ಒಡೆದು ರೈತರ ಹತ್ತಿ ಇನ್ನೀತರ ಬೆಳೆಗೆ ನುಗ್ಗಿದ ನೀರು ಅಪಾರ ಪ್ರಮಾಣದಲ್ಲಿ ಸಂಗ್ರಹವಾಗಿ ಜಮೀನಿನಲ್ಲಿ ನಿಂತಿದೆ,
ಬೆಳಿಗ್ಗೆ ಇದನ್ನು ಗಮನಿಸಿದ ರೈತರು ಆತಂಕದಲ್ಲಿ ಸನ್ನತಿ ಏತ ನೀರಾವರಿ ಯೋಜನೆಯ ಹಿರಿಯ ಅಧಿಕಾರಿಗಳಿಗೆ ಗಮನಕ್ಕೆ ತಂದಿದ್ದಾರೆ, ಆದರೂ ನೀರು ಹರಿಯುವುದು ನಿಂತಿಲ್ಲ, ಇಂತಹ ಘಟನೆ ಮತ್ತೊಮ್ಮೆ ಮರುಕಳಿಸದಂತೆ ಎಚ್ಚಿರಿಕೆ ವಹಿಸಬೇಕು, ತಪ್ಪಿತಸ್ಥ ರೈತರ ವಿರುದ್ಧ ಅಧಿಕಾರಿಗಳು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ,