ಬೆಂಗಳೂರು ; ಇದು ಸೆಲೆಬ್ರಿಟಿಗಳಿಗಾಗಿ ನಡೆದಿದ್ದ ಪಾರ್ಟಿ.. ರಾತ್ರಿ ಶುರುವಾದ ಪಾರ್ಟಿ ಬೆಳಗ್ಗೆ ಆದ್ರೂ ನಿಂತಿರ್ಲಿಲ್ಲ. ಏನ್ ನಡೀತಿದೆ, ಏನ್ ಆಗ್ತಿದೆ. ರೂಲ್ಸ್ ರೆಗ್ಯೂಲೆಶನ್ಸ್ ಏನು ಇಲ್ವಾ ಅಂತ ನೋಡೋ ಅಷ್ಟರಲ್ಲೇ ಪೊಲೀಸರು ರೇಡ್ ಮಾಡಿ, ಪಾರ್ಟಿ ಆರ್ಗನೈಷ್ ಮಾಡಿದ್ದ ಪಬ್ ಓನರ್ ವಿರುದ್ಧ ಕೇಸ್ ಜಡಿದಿದ್ದಾರೆ. ಅಷ್ಟಕ್ಕೂ ಆ ಪಬ್ ಯಾವ್ದು ತೋರಿಸ್ತೀವಿ ನೋಡಿ.
ಈ ಸಿಸಿ ಟಿವಿ ದೃಷ್ಯವಳಿಯನ್ನ ಸರಿಯಾಗಿ ನೋಡಿ, ಒಬ್ಬರ ಹಿಂದೆ ಒಬ್ಬರಂತೆ ಕಾರಿನಲ್ಲಿ ಹೋಗ್ತಾ ಇರೋದು ನೋಡಿದ್ರೇ ನಿಮಗು ಒಂದು ಕ್ಷಣ ಯೋಚನೆ ಬರಬಹುದು..ಇದು ಯಾವುದೋ ಸಿನಿಮಾ ಅಥವಾ ಕಾರ್ಯಕ್ರಮದ ದೃಷ್ಯವಳಿಯಲ್ಲ..ಇದು ರಾತ್ರಿಯೇಲ್ಲ ರೂಲ್ಸ್ ಬ್ರೇಕ್ ಮಾಡಿ ಪಾರ್ಟಿ ಮಾಡಿ ಪೊಲೀಸರು ರೇಡ್ ಮಾಡಿದ ಮೇಲೆ ಹೊರಗೆ ಹೋಗ್ತಾ ಇರೋ ಸೆಲೇಬ್ರೀಟಿಗಳ ದೃಷ್ಯವಳಿಗಳು..
ಯೆಸ್. ರಾಜಧಾನಿ ಬೆಂಗಳೂರಿನಲ್ಲಿ ಪಬ್, ರೆಸ್ಟೋರೆಂಟ್ಗಳಿಗೆ ಮೂಗುದಾರ ಇಲ್ಲದಂಗಾಗಿದೆ. ಪೊಲೀಸರ ಭಯವೇ ಇಲ್ಲದೇ ಇಷ್ಟಬಂದಂತೆ ರೂಲ್ಸ್ ಮೀರಿ ವರ್ತಿಸುತ್ತಿವೆ. ಇಂತದ್ದೆ ವಿವಾದಕ್ಕೆ ರಾಜಾಜಿನಗರದ ಜೆಟ್ಲ್ಯಾಗ್ ರೆಸ್ಟೋಬಾರ್ ಸಿಲುಕಿದೆ. ಕಳೆದ 2 ದಿನಗಳ ಹಿಂದೆ ರೂಲ್ಸ್ ಬ್ರೇಕ್ ಮಾಡಿ ರಾತ್ರಿಯೆಲ್ಲ ಪಾರ್ಟಿ ಮಾಡಿಸಿದ್ದ ಜೆಟ್ಲ್ಯಾಗ್ ಪಬ್ ಓನರ್ ಶಶಿರೇಖಾ ಜಗದೀಶ್ ವಿರುದ್ಧ ಸುಬ್ರಮಣ್ಯ ನಗರ ಪೊಲೀಸ್ ಠಾಣೇಯಲ್ಲಿ ಕೇಸ್ ದಾಖಲಾಗಿದ್ದು, ಜೆಟ್ಲ್ಯಾಗ್ ಓನರ್ಗೆ ಸಂಕಷ್ಟ ಎದುರಾಗಿದೆ.
ರೂಲ್ಸ್ ಪ್ರಕಾರ ರಾತ್ರಿ ಒಂದು ಗಂಟೆಗೆ ಎಲ್ಲಾ ಪಬ್, ರೆಸ್ಟೋರೆಂಟ್ಗಳನ್ನ ಕ್ಲೋಸ್ ಮಾಡಬೇಕು. ಆದ್ರೆ ಜೆಟ್ಲ್ಯಾಗ್ ಪಬ್ ನಲ್ಲಿ ಯಾವ ಭಯವೂ ಇಲ್ಲದೆ ಪಾರ್ಟಿಗೆ ಬಂದವರಿಗೆ ರಾತ್ರಿಯೆಲ್ಲ ಗುಂಡುತುಂಡು ಸಪ್ಪೈ ಮಾಡಲಾಗಿದೆ.. ಆದ್ರೆ ರಾತ್ರಿ ಗಸ್ತಿನಲ್ಲಿದ್ದ ಪೊಲೀಸರು ರೂಲ್ಸ್ ಮೀರಿದ ಪಬ್ ಕ್ಲೋಸ್ ಮಾಡಿಸ್ದೆ ಗಪ್ಚುಪ್ ಆಗಿದ್ರು. ಈ ವೇಳೆ ಪಬ್ ಅವಂತಾರದ ಮಾಹಿತಿ ತಿಳಿದ ಪೊಲೀಸ್ ಕಮಿಷನರ್ ದಯಾನಂದ್ ಸಂಬಂಧಪಟ್ಟ ಪೊಲೀಸರಿಗೆ ತರಾಟೆಗೆ ತೆಗೆದುಕೊಂಡ್ರು. ಆ ಬಳಿಕವಷ್ಟೇ FIR ಹೈಡ್ರಾಮಾ ನಡೆದಿದ್ದು, ಕರ್ತವ್ಯ ಲೋಪ ಎಸಗಿದ ಪೊಲೀಸರ ವಿರುದ್ಧ ಕ್ರಮ ಫಿಕ್ಸ್ ಆಗಿದೆ. .
ಸದ್ಯ ರೂಲ್ಸ್ ಬ್ರೇಕ್ ಮಾಡಿ ಪಾರ್ಟಿ ಮಾಡಿಸಿದ್ದ ಜೆಟ್ಲ್ಯಾಗ್ ವಿರುದ್ಧ ಈಗಾಗಲೇ FIR ದಾಖಲಾಗಿದ್ದು, ಪೊಲೀಸರು ತನಿಖೆ ಶುರುಮಾಡಿದ್ದಾರೆ. ತನಿಖೆ ಭಾಗವಾಗಿ ಜೆಟ್ಲ್ಯಾಗ್ ಓನರ್ ಗೆ ನೋಟಿಸ್ ನೀಡಿದ್ದು, ಪಾರ್ಟಿ ನಡೆದ ಸಮಯದ ಸಿಸಿಟಿವಿ ವಿಶ್ಯೂಹಲ್ ನೀಡುವಂತೆ ಸೂಚಿಸಲಾಗಿದೆ. ಒಟ್ನಲ್ಲಿ ಈ ಘಟನೆ ಬೆಂಗಳೂರಲ್ಲಿ ಸೆಲೆಬ್ರಿಟಿಗಳಿಗೆ ಒಂದು ನ್ಯಾಯ, ಸಾರ್ವಜನಿಕರಿಗೆ ಒಂದು ನ್ಯಾಯ ಅನ್ನೋ ಟೀಕೆಗೆ ಗುರಿಯಾಗಿದೆ.
ವರದಿ : ಆರ್ ವೆಂಕಟೇಶ್