ಮಂಡ್ಯ : ಗಣೇಶ ಹಬ್ಬದ ಸಂಭ್ರಮದಲ್ಲಿ ಇದ್ದ ಕಾವೇರಿ ಕೊಳ್ಳದ ಜನತೆಗೆ ಮತ್ತೋಮ್ಮ ಗಾಯದ ಮೇಲೆ ಬರೆ ಎಳೆದಂತೆ ಹಾಗಿದೆ. ಮಳೆಯ ಕೊರೆತಯಿಂದ ನೀರಿಲ್ಲದೆ ಆತಂಕದಲ್ಲಿ ಇರೋ ರೈತರಿಗೆ ಮತ್ತೆ ಶಾಕ್ ನೀಡಿದೆ. ನೀರು ನಿರ್ವಹಣ ಸಮೀತಿ ಶಿಫಾರಸ್ಸನ್ನೆ ಎತ್ತಿ ಹಿಡಿಯುವ ಮೂಲಕ ಪ್ರಾಧಿಕಾರ ರಾಜ್ಯದ ಜನತೆಯ ಬಾಯಿಗೆ ಬಿಸಿ ತುಪ್ಪ ಸುರಿದಿದೆ. ಈ ಮೂಲಕ ಗಣೇಶ ಚತುರ್ಥಿಯಂದೆ ರೈತರು ಬೀದಿಗೆ ಇಳಿದು ಪ್ರತಿಭಟನೆ ಮಾಡುವಂತಾಗಿದೆ.
ಹೌದು ಕಳೆದ ಹಲವು ದಿನಗಳಿಂದ ಕಾವೇರಿ ಕೊಳ್ಳದ ರೈತರು ಜೀವ ಜಲಕ್ಕಾಗಿ ಹೋರಾಟ ಮಾಡುತ್ತ ಬಂದಿದ್ದಾರೆ. ಪ್ರಸ್ತುತ ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯ ಕೊರತೆಯಿಂದ ನದಿಯಲ್ಲಿ ನೀರಿನ ಮಟ್ಟ ಕುಸಿದಿದೆ. ಪ್ರಸ್ತುತ ನದಿಯಲ್ಲಿ 20 ಟಿಎಂಸಿ ನೀರು ಮಾತ್ರ ಇದ್ದು, ಅದರಲ್ಲಿ 5 ಟಿಎಂಸಿ ನೀರು ಡೆಡ್ ಸ್ಟೋರೇಜ್ ಹಾಗಿದ್ದು, ಉಳಿಯೋದು ಕೇವಲ 15 ಟಿಎಂಸಿ ನೀರು.
ಇದರ ನಡುವೆಯೂ ಪ್ರಾಧಿಕಾರ ತಮಿಳುನಾಡಿಗೆ ಪ್ರತಿನಿತ್ಯ 5 ಸಾವಿರ ಕ್ಯೂಸೆಕ್ ನಂತೆ 15 ದಿನ ನೀರು ಹರಿಸಲು ಸೂಚನೆ ನೀಡಿದೆ. ಇದರ ಪ್ರಕಾರ ನದಿಯಿಂದ 7.5 ಟಿಎಂಸಿ ನೀರನ್ನ ತಮಿಳುನಾಡಿಗೆ ಬಿಡಲು ತಿಳಿಸಿದೆ. ಈಗಾಗಿ ಮಂಡ್ಯದಲ್ಲಿ ಅನ್ನದಾತರ ಆಕ್ರೋಶ ಬುಗಿಲೆದ್ದಿದೆ. ಪ್ರಾಧಿಕಾರ ತೀರ್ಪು ಕೊಡುತ್ತಿದ್ದಂತೆ ರೈತರು ಮಳೆಯನ್ನು ಲೆಕ್ಕಿಸದೆ ರಸ್ತೆಗೆ ಇಳಿದು ಪ್ರತಿಭಟನೆ ಮಾಡಿದ್ದಾರೆ.
ಇನ್ನೂ ತೀರ್ಪು ಹೊರ ಬೀಳುತ್ತಿದ್ದಂತೆ ಮಂಡ್ಯದಲ್ಲಿ ರೈತರ ಆಕ್ರೋಶ ಕಟ್ಟೆ ಹೊಡೆಯಿತು. ಮಳೆಯನ್ನು ಲೆಕ್ಕಿಸದೆ ರಾಜ್ಯ ಸರ್ಕಾರ ಹಾಗೂ ಪ್ರಾಧಿಕಾರದ ವಿರುದ್ದ ಘೋಷಣೆ ಕೂಗಿ ಮಳೆಯಲ್ಲಿಯೇ ಕೂತು ಪ್ರತಿಭಟನೆ ಮಾಡಿದ್ರು. ಕಾವೇರಿ ಪ್ರಾಧಿಕಾರ ಅಂಕಿಅಂಶಗಳ ದಾಖಲೆ ಇದ್ದರೂ ಸಹ ಯಾವ ಮಾನದಂಡದಲ್ಲಿ ನೀರು ಬಿಡಲು ಹೇಳಿದೆ ಗೊತ್ತಾಗುತ್ತಿಲ್ಲ. ರಾಜ್ಯ ಸರ್ಕಾರವು ಸಹ ಸಮರ್ಥ ವಾದ ಮಂಡಿಸಲು ವಿಫಲವಾಗಿ. ರಾಜ್ಯ ಸರ್ಕಾರ ರಾಜಕೀಯ ಲಾಭಕ್ಕಾಗಿ ತಲೆ ಬಾಗ್ತಿದೆ ಅನ್ನಿಸುತ್ತಿದೆ. ಕಾವೇರಿ ಕೊಳ್ಳದ ಶಾಸಕರು, ಸಂಸದರು ಇಂದೇ ರಾಜೀನಾಮೆ ನೀಡಬೇಕು. ಎಂದು ಆಗ್ರಹಿಸಿದರು.