ಬೆಂಗಳೂರು : ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ಧದ ಸಿಬಿಐ ತನಿಖೆಗೆ ನೀಡಿದ್ದ ಅನುಮತಿಯನ್ನು ವಾಪಸ್ ಪಡೆಯಲು ಸಚಿವ ಸಂಪುಟ ಒಪ್ಪಿಗೆ ನೀಡಿರುವುದಕ್ಕೆ ಎಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿ, ಇದು ಸ್ವಜನ ಪಕ್ಷಪಾತ ಅಲ್ಲ ಇದು , ದರೋಡೆಕೋರನ್ನ ರಕ್ಷಣೆ ಮಾಡೋಕೆ ಇರುವ ಸರ್ಕಾರ ಇದು. ಅಮೇಲೆ ಮಾತಾಡ್ತೀನಿ.
ಕೋರ್ಟ್ ನಲ್ಲಿ ಇರುವುದರಿಂದ ಜಾಸ್ತಿ ಮಾತಾಡೋದು ಬೇಡ. ಮರ್ಯಾದೆ ಇದ್ದರೆ ಹೆದರುತ್ತಾರೆ. ಮರ್ಯಾದೆ ಇಲ್ಲದವರಿಗೆ ಕೋರ್ಟ್ ನಲ್ಲಿ ಇದ್ದರೇನು? ಯಾವುದರಲ್ಲಿ ಇದ್ದರೇನು? ಯಾವುದನ್ನು ಬೇಕಾದರು ಕೊಂಡುಕೊಳ್ಳಬಹುದು ಎಂಬ ದುರಹಂಕಾರದಲ್ಲಿ ಇದ್ದಾರೆ ಎಂದು ಸರ್ಕಾರ ಡಿಕೆಶಿ ವಿರುದ್ಧ ಕೇಸ್ ವಾಪಸ್ ಪಡೆದಿದಕ್ಕೆ ಹೆಚ್ಡಿಕೆ ಕಿಡಿಕಾರಿದ್ದಾರೆ.