ಸಿಡಿ ಪ್ರಕರಣವನ್ನ ಸಿಬಿಐ(cbi) ತನಿಖೆಗೆ ವಹಿಸಲು ಮಾಜಿ ಸಚಿವ ರಮೇಶ್ ಜಾರಕಿಹೊಳಿ ತೀವ್ರ ಕಸರತ್ತು ಆರಂಭಿಸಿದ್ದಾರೆ. ಹುಬ್ಬಳ್ಳಿಯಿಂದ ದೆಹಲಿಗೆ ರಮೇಶ್ ಜಾರಕಿಹೊಳಿ (ramesh jarakiholi)ಪ್ರಯಾಣ ಬೆಳೆಸಿದ್ದಾರೆ. ಬಿಜೆಪಿ ವರಿಷ್ಠರ ಬುಲಾವ್ ಹಿನ್ನೆಲೆಯಲ್ಲಿ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ ಎನ್ನಲಾಗಿದೆ. ಸಿಡಿ ಕುರಿತಂತೆ ರಮೇಶ್ ಜಾರಕಿಹೊಳಿ, ಸಿ ಟಿ ರವಿ(C T ravi) ಜೊತೆಗೆ ವರಿಷ್ಠರು ಇಂದು ಚರ್ಚೆ ನಡೆಸುವ ಸಾಧ್ಯತೆ ಇದೆ.
ಬೆಂಗಳೂರಿ (bengalore) ನಿಂದ ಕೆಲ ಬಿಜೆಪಿ ನಾಯಕರು ದೆಹಲಿಗೆ ಇಂದು ಪ್ರಯಾಣ ಬೆಳೆಸಿದ್ದಾರೆ. ಪ್ರಕರಣವನ್ನ ಸಿಬಿಐ ಕೊಟ್ಟರೇ ಆಗೋ ಲಾಭ, ನಷ್ಟದ ಬಗ್ಗೆ ಲೆಕ್ಕಾಚಾರ ನಡೆಸಲಿದ್ದಾರೆ. ಅನೇಕ ಸಿಡಿ ಇಟ್ಟುಕೊಂಡು ಡಿಕೆಶಿ(d k shivakumar) ಬ್ಲ್ಯಾಕ್ ಮೇಲ್ ಮಾಡಿದ್ದಾರೆ ಎಂಬುದು ಜಾರಕಿಹೊಳಿ ಆರೋಪವಾಗಿದೆ. ಮುಂಬರುವ ಚುನಾವಣೆ ದೃಷ್ಟಿಯಿಂದ ಸಿಡಿ ಪ್ರಕರಣ ಮಹತ್ವ ಪಡೆದುಕೊಂಡಿದೆ.
ಇದನ್ನು ಓದಿ :-ಲಂಬಾಣಿ ಮಹಿಳೆಯರೊಂದಿಗೆ ಹೆಜ್ಜೆ ಹಾಕಿದ ಸಿದ್ದರಾಮಯ್ಯ- ವಿಡಿಯೋ ವೈರಲ್