ಬೆಂಗಳೂರು : ಸೆಲೆಬ್ರಿಟಿಗಳ ಹುಲಿ ಉಗುರು ವಿವಾದ ವಿಚಾರವಾಗಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ನೇತೃತ್ವದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ಜತೆ ಮಹತ್ವ ಸಭೆ ನಡೆಸಲಾಯಿತು.
ವಿಕಾಸಸೌಧದಲ್ಲಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಅರಣ್ಯ ಪರಿಸರ ಇಲಾಖೆಯ ಪ್ರಮುಖ ಅಧಿಕಾರಿಗಳು ಭಾಗಿಯಾಗಿದ್ದರು. ಈ ಸಭೆಯಲ್ಲಿ ಹುಲಿಉಗುರು ಧರಿಸಿದ ಕುರಿತಂತೆ ಚರ್ಚೆನಡೆಸಲಾಯಿತು.