ಬೆಂಗಳೂರು : ಹಿಜಾಬ್ (Hijab) ವಿಚಾರದಲ್ಲಿ ಕಾನೂನು ಪರಿಶೀಲಿಸಿ ನಂತರ ಕ್ರಮ ತಗೆದುಕೊಳ್ಳುತ್ತೇವೆ ಎಂದು ಗೃಹ ಸಚಿವ ಜಿ ಪರಮೇಶ್ವರ್ (Parameshwar) ಹೇಳಿದ್ದಾರೆ. ಈಗಾಗಲೇ ಸಿಎಂ ಸಿದ್ದರಾಮಯ್ಯ (Siddaramaiah) ಅವರು ಸರ್ಕಾರದ ನಿಲುವನ್ನು ತಿಳಿಸಿದ್ದಾರೆ. ಹಾಗಾಗಿ ಎಲ್ಲರಿಗೂ ಈಗ ಗೊತ್ತಾಗಿದೆ.
ಪ್ರತಿಯೊಬ್ಬ ಪ್ರಜೆನೂ ತಾನು ಏನು ಸೇವಿಸಬೇಕು. ತಾನು ಏನು ಧರಿಸಬೇಕು ಎನ್ನುವುದು ಅವರವರಿಗೆ ಬಿಟ್ಟಿದ್ದು. ಈ ಹಕ್ಕು ಸಂವಿಧಾನದಲ್ಲೇ (Constitution) ಇದೆ. ಇದು ಅವರ ಮೂಲಭೂತ ಹಕ್ಕಾಗಿದೆ. ಹಾಗಾಗಿ ಮುಖ್ಯಮಂತ್ರಿಗಳು ಆ ಅರ್ಥದಲ್ಲಿ ಹೇಳಿದ್ದಾರೆ ಎಂದರು.
ಬಿಜೆಪಿಯವರು ಅದನ್ನೇ ಮೂಲವಾಗಿ ಇಟ್ಟುಕೊಂಡು ದೊಡ್ಡ ಪ್ರಮಾಣದಲ್ಲಿ ಬಿಂಬಿಸುತ್ತಿದ್ದಾರೆ. ಅದರ ಅವಶ್ಯಕತೆ ಇಲ್ಲ ಎಂಬುದು ನನ್ನ ಭಾವನೆವಾಗಿದೆ. ಕಾನೂನನ್ನು ಪರಿಶೀಲನೆ ಮಾಡಿಯೇ ಮಾಡುತ್ತೇವೆ. ಕಾನೂನನ್ನ ಬಿಟ್ಟು ಮಾಡುವುದಕ್ಕೆ ಹೋಗುವುದಿಲ್ಲ ಕಾನೂನು ಸುವ್ಯವಸ್ಥೆಯನ್ನು ನಿಯಂತ್ರಿಸಲು ಸರ್ಕಾರ ಸಮರ್ಥವಾಗಿದೆ ಎಂದು ಹೇಳಿದರು.