ಮಹಾರಾಷ್ಟ್ರ: ಮಹಾರಾಷ್ಟ್ರದ ಪಾಲ್ಘಡದಲ್ಲಿ ಗಂಟಲಲ್ಲಿ ಬಲೂನ್ ಸಿಲುಕಿಕೊಂಡು 3 ವರ್ಷದ ಬಾಲಕ ಸಾವನ್ನಪ್ಪಿದ ಘಟನೆ ಬೆಳಕಿಗೆ ಬಂದಿದೆ.
ಬಾಲಕ ಸಂಜೆಯ ಸಮಯದಲ್ಲಿ ಸ್ನೇಹಿತರೊಂದಿಗೆ ಆಟವಾಡಿಕೊಂಡಿದ್ದ ಮಗುವಿನ ಆರೋಗ್ಯದಲ್ಲಿ ಏರುಪೇರಾಗಿದ್ದು ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸಾಧ್ಯವಾಗದ ಕಾರಣ ಮಗು ಪ್ರಾಣ ಕಳೆದುಕೊಂಡಿದೆ. ಬಳಿಕ ಪರಿಶೀಲನೆ ಮಾಡಿದಾಗ ಆಟವಾಡುತ್ತಾ ಬಲೂನ್ ನುಂಗಿರುವ ವಿಚಾರ ಬೆಳಕಿಗೆ ಬಂದಿದೆ. ಈ ಕಾರಣದಿಂದಾಗಿ ಮಕ್ಕಳು ಆಟದ ನೆಪದಲ್ಲಿ ಏನ್ ಮಾಡುತ್ತಿವೆ ಏನ್ ತಿನ್ನುತ್ತಿವೆ ಅನ್ನೋದನ್ನು ಗಮನಿಸೋದು ಸೂಕ್ತ ಸ್ವಲ್ಪ ನಿರ್ಲಕ್ಷ್ಯವಹಿಸಿದ್ರೂ, ಸಮಸ್ಯೆ ತಪ್ಪಿದಲ್ಲ ಅನ್ನೋದಕ್ಕೆ ಈ ಘಟನೆಯೇ ಉದಾಹರಣೆಯಾಗಿದೆ.