ಬೆಂಗಳೂರು : ಕ್ರಿಸ್‌ಮಸ್, ನ್ಯೂ ಇಯರ್ ಹಿನ್ನಲೆ ಸಾಲು ಸಾಲು ರಜೆಗಳು ಇರುವುದ್ದರಿಂದ ಊರಿಗೆ ಹೋಗಲು ಇರುವವರಿಗೆ ಒನ್ ಲೈನ್ ಬಸ್ ಬುಕ್ಕಿಂಗ್ ಆ್ಯಪ್ಗಳು ಬಿಗ್ ಶಾಕ್ ಕೊಟ್ಟಿದೆ.
ಬಹುತೇಕ ಊರುಗಳಿಗೆ ಹೋಗುವ ಖಾಸಗಿ ಬಸ್ಗಳ ದರ ಮತ್ತು ಒನ್ ಲೈನ್ ಬಸ್ ಬುಕ್ಕಿಂಗ್ ಆ್ಯಪ್ಗಳ ದರ ದುಪ್ಪಟ್ಟು ನಿಗದಿ ಮಾಡಿದೆ. ನಿನ್ನೆ, ಇಂದು ಮತ್ತು ನಾಳೆ ಮೂರು ದಿನಗಳ ಕಾಲ ರಜೆ ಹಿನ್ನೆಲೆ ಬಸ್ ಟಿಕೆಟ್ಗಳ ದರ ಸಾಮಾನ್ಯ ದರಕ್ಕಿಂತ ಎರಡು ಪಟ್ಟು ಹೆಚ್ಚಾಗಿದೆ.
ಖಾಸಗಿ ಬಸ್ ಬುಕ್ಕಿಂಗ್ ಆ್ಯಪ್ಗಳು ಪ್ರಯಾಣಿಕರಿಂದ ಹೆಚ್ಚಿನ ಹಣ ಸುಲಿಗೆ ಮಾಡುತ್ತಿದೆ. ಬೇಕಾಬಿಟ್ಟಿ ದರ ಹೆಚ್ಚಿಸುತ್ತಿರುವ ಖಾಸಗಿ ಬಸ್ ಆ್ಯಪ್ಗಳ ಮೇಲೆ ಕ್ರಮ ಯಾವಾಗ ಎಂದು ಜನ ಪ್ರಶ್ನಿಸಿದ್ದಾರೆ.
ಬಸ್ ದರ ಪಟ್ಟಿ ಇಲ್ಲಿದೆ :
- ಬೆಂಗಳೂರು-ಶಿವಮೊಗ್ಗ 450-650 ರೂ.ರಿಂದ ಈಗ 1000-1400 ಇದೆ.
- ಬೆಂಗಳೂರು- ಹುಬ್ಬಳಿ 600-850ರೂ. ಇತ್ತು. ಈಗ 1550-2000 ರೂ.
- ಬೆಂಗಳೂರು-ಮಂಗಳೂರು 600-900 ರೂ. ಈಗ 1500-1800ರೂ.
- ಬೆಂಗಳೂರು – ಉಡುಪಿ 700-800ರೂ ಯಿಂದ 1600 – 1900 ರೂ.
- ಬೆಂಗಳೂರು-ಧಾರವಾಡ 650-850 ರೂ ಯಿಂದ 1500-2100 ರೂ ಇದೆ.
- ಬೆಂಗಳೂರು-ಬೆಳಗಾವಿ 700-900 ರೂ ಇತ್ತು. ಈಗ 1500-2100 ರೂ.ಇದೆ
- ಬೆಂಗಳೂರು – ದಾವಣಗೆರೆ 450-700 ರೂ ಇತ್ತು. ಈಗ 1200-1650 ರೂ. ಇದೆ.
- ಬೆಂಗಳೂರು – ಚಿಕ್ಕಮಗಳೂರು 600-650 ರೂ ಇತ್ತು. 1250-1500 ರೂ ಇದೆ.
- ಬೆಂಗಳೂರು – ಹಾಸನ 650-850 ರೂ ಇತ್ತು. ಈಗ 1600-1850 ರೂ ಇದೆ.
- ಬೆಂಗಳೂರು-ಕುಮಟಾ 650-750 ರೂ. ಇತ್ತು. 1200-1600 ರೂ ಇದೆ.
- ಬೆಂಗಳೂರು -ಕಲಬುರಗಿ 850-1000 ರೂ. ಇತ್ತು. 1800-2300 ರೂ ಇದೆ.