Breaking News CM ಸಿದ್ದರಾಮಯ್ಯ ಪರ ಅಶೋಕ್ ಬ್ಯಾಟಿಂಗ್.!Political NewsState News

ಲಾಲ್ ಬಾಗ್ ನಲ್ಲಿ ಫಲಪುಷ್ಪ ಪ್ರದರ್ಶನ ಉದ್ಘಾಟಿಸಿದ ಸಿಎಂ ಬಸವರಾಜ ಬೊಮ್ಮಾಯಿ

ಗಣರಾಜ್ಯೋತ್ಸವ ಹಿನ್ನೆಲೆ ಇಂದಿನಿಂದ 10 ದಿನಗಳ ಕಾಲ ಲಾಲ್ ಭಾಗ್ ನಲ್ಲಿ ನಡೆಯಲಿರುವ 213ನೇ ಫಲಪುಷ್ಪ ಪ್ರದರ್ಶನಕ್ಕೆ ಸಿಎಂ ಬೊಮ್ಮಾಯಿ (BASAVARA BOMMAI) ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದ್ದಾರೆ.

ಗಣರಾಜ್ಯೋತ್ಸವ ಹಿನ್ನೆಲೆ ಇಂದಿನಿಂದ 10 ದಿನಗಳ ಕಾಲ ಲಾಲ್ ಭಾಗ್ ನಲ್ಲಿ ನಡೆಯಲಿರುವ 213ನೇ ಫಲಪುಷ್ಪ ಪ್ರದರ್ಶನಕ್ಕೆ ಸಿಎಂ ಬೊಮ್ಮಾಯಿ (BASAVARA BOMMAI) ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದ್ದಾರೆ.

ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ಇಂದು ಬಹಳ ಸಂತೋಷದಿಂದ 213 ಪ್ಲವರ್ ಶೋ ಉದ್ಘಾಟನೆ ಮಾಡಿದ್ದೇನೆ. ಈ ಬಾರಿಯ ಫ್ಲವರ್ ಶೋ (FLOWER SHOW)ತುಂಬಾ ಚೆನ್ನಾಗಿ ಮೂಡಿಬಂದಿದೆ. ಪ್ರತಿವರ್ಷ ಲಕ್ಷಗಟ್ಟಲೆ ಜನರು ಈ ಫ್ಲವರ್ ಶೋ ಗೆ ಬರ್ತಾರೆ. ಈ ಬಾರಿ 10 ರಿಂದ 15 ಲಕ್ಷ ಜನರು ಬರ್ತಾರೆ. ಜನರನ್ನ ನಿಭಾಯಿಸುವುದಕ್ಕೆ ಎಲ್ಲಾ ರೀತಿಯ ಸಿದ್ದತೆಯನ್ನ ತೋಟಗಾರಿಕೆ ಇಲಾಖೆ ಮಾಡಿಕೊಂಡಿದೆ. ತೋಟಾಗಾರಿಕೆಯ ಫಲಪುಷ್ಪ ಪ್ರದರ್ಶನ ವಿಶಿಷ್ಟವಾದದ್ದು ಪ್ರದರ್ಶನದಲ್ಲಿ ನಮ್ಮ ರಾಜ್ಯ ಸಂಪತ್ತು ಎಷ್ಟು ಇದೆ, ಎಷ್ಟು ವಿಶೇಷ ಹಾಗೂ ವಿಶಾಲವಾಗಿದೆ ಎಂಬುದನ್ನ ತಿಳಿಸುತ್ತದೆ. ಇದನ್ನು ಓದಿ :- ಹನುಮಂತನಗರ ಪೊಲೀಸರಿಂದ ಖತರ್ನಾಕ್ ‘ಚಡ್ಡಿ’ಗ್ಯಾಂಗ್ ಬಂಧನ

Image

ನಗರದಲ್ಲಿ ತೋಟಗಾರಿಕೆಯ ಹಸೀರಿಕರಣವನ್ನ ಹೆಚ್ಚಿಸಲು ಅನುದಾನವನ್ನ ಮೀಸಲಿಡುತ್ತಿದ್ದೇವೆ. ಈ ವರ್ಷದ ಬಜೆಟ್ ನಲ್ಲಿ 100 ಕೋಟಿಯನ್ನ ಹಸಿರೀಕರಣ ಹೆಚ್ಚಿಸಲು ಮೀಸಲಿಟ್ಟಿದ್ದೇವೆ. ಗುಡ್ಡಗಾಡು ಪ್ರದೇಶದಲ್ಲಿ ಹಸೀಕರಣ ಮಾಡುತ್ತೇವೆ. ತೋಟಗಾರಿಕೆ ಫಾಮ್ ಅಭಿವೃದ್ಧಿಗೆ ವಿಶೇಷ ಕಾರ್ಯಕ್ರಮ ಮಾಡುತ್ತೇವೆ. ತೋಟಗಾರಿಕೆಯಲ್ಲಿ ಹಸಿರೀಕರಣ ಅಷ್ಟೇ ಅಲ್ಲದೇ ಉತ್ಪಾದನೆಯು ಹೆಚ್ಚಾಗಲಿದೆ. ಬೆಂಗಳೂರು (BANGALORE)ಗಾರ್ಡಾನ್ ಸಿಟಿ ಎಂದು ಹೆಸರುವಾಸಿಯಾಗಿದೆ. ಇತ್ತೀಚಿನ ದಿನಗಳಲ್ಲಿ ಗಾರ್ಡನ್ ಸಿಟಿ ಅಭಿವೃದ್ಧಿ ಕಡಿಮೆಯಾಗಿದೆ. ಇನ್ಮುಂದೆ ಗಾರ್ಡಾ ನ್ ಸಿಟಿ ಹೆಸರಿಗೆ ತಕ್ಕಂತೆ ಗಾರ್ಡಾನ್ ಗಳನ್ನ ಅಭಿವೃದ್ಧಿ ಪಡಿಸುತ್ತೇವೆ. BBMP ವ್ಯಾಪ್ತಿಯಾ ಗಾರ್ಡನ್ ಹಾಗೂ ತೋಟಗಾರಿಕೆ ಗಾರ್ಡನ್ ಗಳು ಅಭಿವೃದ್ಧಿ ಪಡಿಸುತ್ತೇವೆ. ಫಲಪುಷ್ಪ ಪ್ರದರ್ಶನ ಈ ಬಾರಿ ಯಶಸ್ವಿಯಾಗಲಿ ಎಂದು ಹೇಳಿದ್ರು.

ಇದನ್ನು ಓದಿ :- KRPP ಪಕ್ಷ ನಿರೀಕ್ಷೆಗೂ ಮೀರಿ ಜನರನ್ನು ತಲುಪುತ್ತಿದೆ – ಜನಾರ್ದನ ರೆಡ್ಡಿ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!