ಬೆಳಗಾವಿ : ಮುಸ್ಲಿಮರಿಗೆ ಅನ್ಯಾಯವಾಗಲು ನಾನು ಬಿಡಲ್ಲವೆಂದು ನಾನು ಹೇಳಿದ್ದು. ಬೇರೆ ರೀತಿ ಅರ್ಥ ಕಲ್ಪಿಸಿಕೊಂಡು ಹೇಳಿದರೆ ಏನು ಮಾಡುವುದು ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.
ಬೆಳಗಾವಿಯ ಸುವರ್ಣಸೌಧದಲ್ಲಿ ಮಾಧ್ಯಮದೊಂದಿಗೆ ಮಾತನಾಡಿ ಅವರು , ಈ ಬಗ್ಗೆ ಒಂದು ಪತ್ರಿಕೆ ಮಾತ್ರ ನಾನು ಹೇಳಿದ್ದನ್ನು ಸರಿಯಾಗಿ ಬರೆದಿದೆ. ಮುಸ್ಲಿಮರಿಗೆ ಅನ್ಯಾಯವಾಗಲು ನಾನು ಬಿಡಲ್ಲ, ದೇಶದ ಸಂಪತ್ತನ್ನು ಮುಸ್ಲಿಮರಿಗೆ ಹಂಚುತ್ತೇನೆ. ನಿಮ್ಮನ್ನು (ಮುಸ್ಲಿಂ) ನಾನು ರಕ್ಷಣೆ ಮಾಡುತ್ತೇನೆ ಎಂದೆಲ್ಲ ಬೇರೆ ರೀತಿ ಅರ್ಥ ಕಲ್ಪಿಸಿಕೊಂಡು ಹೇಳಿದ್ದಾರೆ ಏನು ಮಾಡೋದು ಬೇಸರ ವ್ಯಕ್ತಪಡಿಸಿದ್ದಾರೆ