ಮೈಸೂರು ; ಜಿಲ್ಲೆ ಪ್ರವಾಸದಲ್ಲಿರುವ ಸಿಎಂ ಸಿದ್ದರಾಮಯ್ಯ ಅವರು ಇಂದು ಮೈಸೂರಿನ ವಿವಿಧ ಕಾರ್ಯಕ್ರಮದಲ್ಲಿ ಸಿಎಂ ಭಾಗಿಯಾಗಲಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರು ಮಧ್ಯಾಹ್ನ 12.30ಕ್ಕೆ ರಾಮಕೃಷ್ಣ ನಗರದ ಲಿಂಗಾಬುದಿ ಕೆರೆಯ ಸಸ್ಯಶಾಸ್ತ್ರೀಯ ತೋಟವನ್ನು ಉದ್ಘಾಟನೆ ಮಾಡಲಿದ್ದಾರೆ. ತೋಟಗಾರಿಕೆ ಪಿತಾಮಹ ಡಾ.ಎಮ್ .ಹೆಚ್. ಮರೀಗೌಡ ಪ್ರತಿಮೆ ಅನಾವರಣ ಮಾಡಲಿದ್ದಾರೆ.
ಮತ್ತೆ ಕರ್ಜನ್ ಪಾರ್ಕ್‌ನಲ್ಲಿರುವ ಮರೀಗೌಡ ಪ್ರತಿಮೆ ನಂತರ ವರಸಿದ್ಧಿ ವಿನಾಯಕ ಹೆಲ್ತ್‌ಕೇರ್‌ನ ಆರ್ಯ ಆಸ್ಪತ್ರೆ ಉದ್ಘಾಟನೆ ಮಾಡಲಿದ್ದಾರೆ. ಬಳಿಕ ಚಾಮರಾಜಪುರಂದಲ್ಲಿರುವ ಆರ್ಯ ಆಸ್ಪತ್ರೆ ಉದ್ಘಟಿಸಲಿದ್ದಾರೆ. ಸಂಜೆ 4 ಗಂಟೆಗೆ ಸಿಎಂ ಸಿದ್ದರಾಮಯ್ಯ ಬೆಂಗಳೂರಿಗೆ ಆಗಮಿಸಲಿದ್ದಾರೆ ಎಂದು ವರದಿಯಾಗಿದೆ.