ಪ್ರವೇಶ ಪತ್ರ ನೀಡಿದ ಮೇಲೂ ಹಾಜರಾತಿ ಕಡಿಮೆ ಇದೆ ಎನ್ನುವ ಕಾರಣ ಕೊಟ್ಟು 48 ವಿದ್ಯಾರ್ಥಿಗಳನ್ನು ಪರೀಕ್ಷಾ ಕೇಂದ್ರಗಳಿಂದ ಸಿಬ್ಬಂದಿಗಳು ಹೊರಹಾಕಿರುವ ಅಮಾನವೀಯ ಘಟನೆ ವಿಜಯನಗರದಲ್ಲಿ ನಡೆದಿದೆ.
ವಿಜಯನಗರ: ಇಂದು ರಾಜ್ಯಾದ್ಯಂತ ದ್ವಿತೀಯ ಪಿ.ಯು,ಸಿ ವಾರ್ಷಿಕ ಪರೀಕ್ಷೆಗಳು ನಡೆಯುತ್ತಿದ್ದು, ವಿಜಯನಗರ ಜಿಲ್ಲೆಯ ಹರಪ್ಪನಹಳ್ಳಿ ಪಟ್ಟಣದಲ್ಲಿ ಇರುವ ಹೆಚ್.ಪಿ.ಎಸ್ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡುವ ಘಟನೆಯೊಂದು ಶಾಲಾ ಸಿಬ್ಬಂದಿಗಳಿಂದ ನಡೆದಿದೆ. ನಿನ್ನೆಯೇ ಹಾಲ್ಟ್ ಟಿಕೆಟ್ ನೀಡಿದ ಕಾಲೇಜು ಆಡಳಿತ ಮಂಡಳಿ 48 ಮಕ್ಕಳ ಹಾಜರಾತಿ ಕಡಿಮೆ ಇದೆ ಎನ್ನುವ ಕಾರಣ ಕೊಟ್ಟು ಇಂದು 48 ಮಕ್ಕಳಿಗೆ ಪರೀಕ್ಷೆ ಬರೆಯದಂತೆ ತಡೆದು ವಿದ್ಯಾರ್ಥಿಗಳನ್ನ ಆಚೆ ಕಳಿಸಿದ್ದಾರೆ…
ಈ ಹಿನ್ನೆಲೆಯಲ್ಲಿ ಪರೀಕ್ಷಾ ವಂಚಿತ ವಿದ್ಯಾರ್ಥಿಗಳು ಕಾಲೇಜು ಮುಂಭಾಗ ಪ್ರತಿಭಟನೆ ಮಾಡಿದ್ದಾರೆ. ಪರೀಕ್ಷೆಯ ಮೊದಲದಿನವಾದ ಇಂದು ಕನ್ನಡ ಪರೀಕ್ಷೆ ಬರೆಯಬೇಕಿತ್ತು. ಆದರೆ ಬೆಳಗ್ಗೆ ಎದ್ದು ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಗಳಿಗೆ ಶಾಕ್ ಎದುರಾಗಿದೆ..ಹಾಜರಾತಿ ಕಡಿಮೆ ಇದ್ದರೆ ಪ್ರವೇಶ ಪತ್ರ ಕೊಡುವ ಮುನ್ನವೇ ವಿದ್ಯಾರ್ಥಿಗಳಿಗೆ ತಿಳಿಸಬೇಕಿತ್ತು.ಆದರೆ ಅದನ್ನ ಮಾಡದೆ ಹಾಲ್ಟ್ ಟಿಕೆಟ್ ಕೊಟ್ಟು ಪರೀಕ್ಷೆಗೆ ಬಂದ ನಂತರ ಈ ರೀತಿ ಮಕ್ಕಳ ಜೀವನದಲ್ಲಿ ಆಟವಾಡಿದ ಸಿಬ್ಬಂದಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶವನ್ನು ಹೊರಹಾಕಿದ್ದಾರೆ. ಸೂಕ್ತ ಕ್ರಮ ಕೈಗೊಂಡು ಪರೀಕ್ಷಾ ವಂಚಿತ ವಿದ್ಯಾರ್ಥಿಗಳಿಗೆ ಮತ್ತೆ ಕನ್ನಡ ಪರೀಕ್ಷೆ ಬರೆಯೋದರ ಜೊತೆಗೆ ಮುಂದಿನ ವಿಷಯಗಳಿಗೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಬೇಕು ಎಂದು ಶಿಕ್ಷಣ ಸಚಿವರಿಗೆ ಆಗ್ರಹಿಸಿದ್ದಾರೆ.
ವರದಿ: ಅಶ್ವದಿವಿತ್, ಹಲಸಬಾಳು